ಜೆಜೆಎಮ್ ಕಾಮಗಾರಿ ಚರಂಡಿಯಲ್ಲಿ ಶುದ್ಧ ಕುಡಿಯುವ ನೀರಿನ ಪೈಪ ಅಳವಡಿಕೆ ಆಕ್ರೋಶ

ಶಹಾಪುರ ಜ 09: ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಜಲಜೀವನ ಮಿಷನ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರೂ ಗ್ರಾಮದಲ್ಲಿ ಯೋಜನೆ ಅನುಷ್ಠಾನದ ಬಗೆಗೆ ಯಾವ ಪೂರ್ವ ಯೋಜನೆ ಮಾಡದೆ ಕಾಮಗಾರಿ ಪ್ರಾರಂಭ ಮಾಡಿದ್ದೆ ಯೋಜನೆ ಹಳ್ಳ ಹಿಡಿಯಲು ಕಾರಣವಾಗಿದೆ. ಈ ಮೋದಲೆ ಗ್ರಾಮದಲ್ಲಿ ಕೆಲ ವಾರ್ಡಗಳಲ್ಲಿನ ಮನೆಗಳಿಗೆ ಬಹುತೇಕ ಶುದ್ಧ ಕುಡಿಯುವ ನೀರಿನ ಸರಬರಾಜು ವ್ಯವಸ್ಥಿತವಾಗಿ ನಡೆಯುತ್ತಿತ್ತು. ಗ್ರಾಮ ಬಹು ಹಿಂದಿನಿಂದಲೂ ಅಪಾರವಾಗಿ ಕುಡಿಯುವ ನೀರಿನ ಸಂಪತ್ತು ಹೊಂದಿದ್ದಾಗಿದೆ. ಆದರೆ ಈ ಜೆ.ಜೆ.ಎಮ್.ಕಾಮಗಾರಿ ನೆಪದಿಂದ ಉತ್ತಮ ಸಿಸಿ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡುವಂತಾಗಿದೆ. ಈ ಹಿಂದೆ ಸುವರ್ಣ ಗ್ರಾಮೋದಯಡಿ ನಿರ್ಮಾಣವಾದ ಸಿಸಿ ರಸ್ತೆಗಳು ಹಾಳು ಮಾಡುತ್ತಿರುವುದರಿಂದ ಗ್ರಾಮಸ್ಥರು ಗುತ್ತಿಗೆದಾರರಿಗೆ ಹಿಡಿ ಶಾಪ ಹಾಕುವಂತಾಗಿದೆ. ವೃದ್ಧರು ,ಮಕ್ಕಳು ,ಮಹಿಳೆಯರು, ಬೈಕ್ ಸವಾರರು ರಸ್ತೆಗಳಲ್ಲಿ ಓಡಾಡದಂತಾಗಿದೆ. ಗ್ರಾಮದಲ್ಲಿ ಕೆಲ ಓಣಿಗಳಲ್ಲಿ ಐದು ವರ್ಷಗಳ ಹಿಂದೆ ಪೈಪಲೈನ್ ಮಾಡಲಾಗಿದೆ. ಆದರೆ ಈ ಜೆ.ಜೆ.ಎಮ್.ಕಾಮಗಾರಿ ಮಾಡುವ ವೇಳೆ ಹಳೆಯ ಪೈಪ ಒಡೆದು ನೀರು ಸಿಸಿ ರಸ್ತೆಯ ಮೇಲೆ ಪೆÇೀಲಾಗುತ್ತಿದ್ದರೂ , ಸರಿಪಡಿಸದೆ ಅದೆ ಜಾಗಕ್ಕೆ ಜೆ.ಜೆ.ಎಮ್ ಕಳಪೆ ಪೈಪ ಅಳವಡಿಸಿ ಕಾಮಗಾರಿ ನಡೆಸುತ್ತಿದ್ದಾರೆ.ಕಾಮಗಾರಿ ಯ ಕಳಪೆ ಪೈಪಗಳನ್ನು ಚರಂಡಿಯಲ್ಲಿ ಕುಡಿಸಿ ಪ್ರತಿ ಮನೆ ಮನೆಗೆ ಚರಂಡಿಯಲ್ಲಿ ಅಳವಡಿಸಿದ ಪೈಪನಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ದೃಶ್ಯ ಕಾಣಬಹುದು.

ಕರೆ ಸ್ವೀಕರಿಸದ ಶಹಾಪುರ ಹಾಗೂ ಯಾದಗಿರಿ ಎಇಇ:

ಚರಂಡಿಯಲ್ಲಿ ಅಳವಡಿಸಿದ ಜೆ.ಜೆ.ಎಮ್.ಕಾಮಗಾರಿ ಪೈಪ ತೆಗೆದು ಬೆರೆ ಕಡೆ ಪೈಪ ಅಳವಡಿಸಲಾಗುವುದು ಎಂದು ಪೆÇಳ್ಳು ಭರವಸೆ ನೀಡಿ ಮೂರು ತಿಂಗಳಾದರೂ ಬದಲಾಯಿಸಿ ಬೇರೆ ಸ್ಥಳದಲ್ಲಿ ಹಾಕದೆ , ಅದರ ಬಗ್ಗೆ ಮಾಹಿತಿ ಕೇಳಲು ಕರೆ ಮಾಡಿದರೆ ಕೈಗೆ ಸಿಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೇವಲ ನೆಪ ಮಾತ್ರಕ್ಕೆ ಆಫಿಸಿಗೆ ಬಂದು ಗುತ್ತಿಗೆದಾರರ ಜೊತೆ ಶಾಮೀಲಾಗಿ ಸ್ಥಳ ಪರೀಶಿಲನೆ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಜಿ.ಪಂ.ಸಿಇಓ ಚಾಟಿ ಬಿಸಬೇಕಿದೆ :

ಯೋಜನೆ ಅನುಷ್ಠಾನಕ್ಕೆ ಜಿ.ಪಂ.ಸಿಇಓ ಇಕ್ರಂ ಪಣತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಯೋಜನೆಗೆ ಸಂಬಂಧಪಟ್ಟಂತೆ ಸಭೆಗಳನ್ನು ನಡೆಸುತ್ತಿದ್ದಾರೆ.ಆದರೆ ಕಾಮಗಾರಿಯ ಗುಣಮಟ್ಟವನ್ನು ನಿರಂತರವಾಗಿ ಪರೀಶಿಲಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪೈಪುಗಳನ್ನು ಮಣ್ಣಿನಲ್ಲಿ ಮುಚ್ಚುವ ಕಾರಣ, ಒಮ್ಮೆ ಮುಚ್ಚಿದರೆ ಸಾಕೂ ಆಮೇಲೆ ನೋಡಿಕೊಳ್ಳೊಣ ಎಂಬ ಬೇಜವ್ದಾರಿತನ ತೋರುವವರಿಗೆ ಜಿ.ಪಂ.ಸಿಇಓ ರವರು ಬಿಸಿ ಮುಟ್ಟಿಸಬೆಕಿದೆ.ಒಟ್ಟಾರೆ ಜಲಜೀವನ ಮಿಷನ್, ತನ್ನ ವಿಷನ್ ಕಾಲೆದುಕೊಳ್ಳದ ಹಾಗೆ ನೋಡಿಕೊಳ್ಳಬೇಕಾಗಿದೆ.


ಗ್ರಾಮದಲ್ಲಿ ಹಳೆಯ ಪೈಪ ಒಡೆದು ನೀರು ಪೆÇೀಲಾಗುತ್ತಿದ್ದರೂ ಅದರ ಮೇಲೆ ಮರಮು ಹಾಕಿ , ಜೆ.ಜೆ.ಎಮ್.ಪೈಪ ಅಳವಡಿಸಿ ಭ್ರಷ್ಟಾಚಾರ ಎಸಗುತ್ತಿರುವ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಪರೀಶಿಲನೆ ಮಾಡದೆ ತಮ್ಮ ಜೇಬು ತುಂಬಿಸಿಕೊಳ್ಳಲು ಕಾಟಾಚಾರದ ಭೇಟಿ ನೀಡಿ ಭ್ರಷ್ಟಾಚಾರದಲ್ಲಿ ತೋಡಗಿರುವ ಕು.ನಿ.ನೈ.ಇಲಾಖೆ ಅಧಿಕಾರಿ ರಾಹುಲ ಕಾಂಬಳೆ ರವರನ್ನು ಕೂಡಲೇ ಅಮಾನುತುಗೊಳಿಸಬೇಕು ,ಇಲ್ಲದಿದ್ದಲ್ಲಿ ಕು.ನಿ.ನೈ.ಇ.ಶಹಾಪುರ ಕಛೇರಿ ಮುಂಭಾಗದಲ್ಲಿ ಅನಿರತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಪತ್ರಿಕೆ ಮೂಲಕ ಎಚ್ಚರಿಕೆ .

                   ಭೀಮರಾಯ ಜೇಗ್ರಿ
   ಗ್ರಾಮ ಪಂಚಾಯತ ಸದಸ್ಯರು ರಸ್ತಾಪುರ