ಜೆಜೆಎಂ ವೈದ್ಯಕೀಯ ಕಾಲೇಜಿಗೆ ಶೇ.94ರಷ್ಟು ಫಲಿತಾಂಶ

 ದಾವಣಗೆರೆ.ಮೇ.೪; ಇತ್ತಿಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ ಪರೀಕ್ಷೆಯಲ್ಲಿ ದಾವಣಗೆರೆಯ  ವೈದ್ಯಕೀಯ ಕಾಲೇಜಾದ ಜ ಜ ಮು ವೈದ್ಯಕೀಯ ಕಾಲೇಜು ದಾಖಲೆಯ ಫಲಿತಾಂಶ ಪಡೆದಿದೆ. ತನ್ನ 55 ವರ್ಷದ ಇತಿಹಾಸದಲ್ಲೆ ಅತಿ ಹೆಚ್ಚು ಶೇಕಡ ತೇರ್ಗಡೆಯ ದಾಖಲೆ ಬರೆದಿದೆ. ಪರೀಕ್ಷೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ದ್ವಿತೀಯ ವರ್ಷದಲ್ಲಿ 30 ವಿದ್ಯಾರ್ಥಿಗಳು, ತೃತೀಯ ವರ್ಷದಲ್ಲಿ 16 ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದಲ್ಲಿ 9 ವಿದ್ಯಾರ್ಥಿಗಳು ಶ್ರೇಷ್ಠ ದರ್ಜೆ ಯಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟಾರೆ 246 ವಿದ್ಯಾರ್ಥಿಗಳು ಅಂತಿಮ ಎಂಬಿಬಿಎಸ್ ನ ಪರೀಕ್ಷೆ ತೆಗೆದು ಕೊಂಡಿದ್ದು ಅದರಲ್ಲಿ 232 ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ತೇರ್ಗಡೆಯಾಗುವುದರೊಂದಿಗೆ ಒಟ್ಟಾರೆ 94% ಸಾಧಿಸಿದ್ದಾರೆ. ಇದರಲ್ಲಿ ಅತಿಹೇಚ್ಚು ಡಿಸ್ಟಿಂಕಶನ್ 9, 175 ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವುದು ಗಮನಾರ್ಹ. ಫಲಿತಾಂಶದ ಬಗ್ಗೆ ಕಾಲೇಜಿನ ಛೇರ‍್ಮನ್ ಹಾಗೂ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.