ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಸೂಚನೆ


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ04. ಗ್ರಾಮದ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಸೆ.2 ರಂದು ಸಾಮಾನ್ಯ ಸಭೆ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಬಿ.ಲೀಲಾವತಿಬಸವನಗೌಡ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಿಡಿಓ ಶಿವಕುಮಾರ ಮಾತನಾಡಿ ಜೆಜೆಎಂ ಯೋಜನೆ ಅಡಿಯಲ್ಲಿ ಗ್ರಾಮದ ಎಲ್ಲಾ 07ವಾರ್ಡುಗಳ ಪ್ರದೇಶಗಳಲ್ಲಿ ಕುಡಿವ ನೀರಿನ ಪೂರೈಕೆಗೆ ವೈಯುಕ್ತಿಕ ನಲ್ಲಿಗಳ ಸಂಪರ್ಕ ನೀಡುವ ಕುರಿತು ಚರ್ಚಿಸುವುದು ಸಭೆಯ ಮುಖ್ಯ ವಿಷಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಸದಸ್ಯರು ಮತ್ತು ಸದಸ್ಯರ ವಾರಸುದಾರರು ಚರ್ಚೆ ನಡೆಸಿ ಜೆಜೆಎಂ ಅನುಷ್ಠಾನದಿಂದ ಗ್ರಾಮದ ಎಲ್ಲಾ ಮನೆಗಳಿಗೆ ಕಾಲುವೆಯ ನೀರನ್ನು ಕುಡಿಯಲು ಒದಗಿಸುವ ಕ್ರಿಯಾ ಯೋಜನೆಯಂತೆ ಕೆಲಸ ನಡೆಯಬೇಕೆಂದು, ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಿಸಬೇಕೆಂದು ತಿಳಿಸಿದರು. ಗ್ರಾಮದ ಕೆಲವು ವಾರ್ಡುಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಯೋಜನೆಯನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸಲಾಯಿತು.
ನಂತರ ಗ್ರಾಮದಲ್ಲಿನ ಎಲ್ಲಾ ಮನೆಗಳನ್ನು ಸರ್ವೆಮಾಡಿಸಿ ಪಂಚತಂತ್ರ 2.0 ದಾಖಲೆಯಲ್ಲಿ ಸೇರ್ಪಡೆ ಮಾಡಲು ದಾಖಲೆಗಳನ್ನು ಕಲೆಹಾಕುವ ಕುರಿತು ಚರ್ಚಿಸಲಾಯಿತು. 15 ನೇ ಹಣಕಾಸು ಯೋಜನೆಗೆ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸುವ ಕುರಿತು, ಗ್ರಾಮದಲ್ಲಿನ ಬಸ್‍ನಿಲ್ದಾಣದ ಹತ್ತಿರವಿರುವ ಕೆರೆಯ ಹೂಳು ತೆಗೆದು ಅಭಿವೃದ್ಧಿಪಡಿಸಲು ನಿರ್ಣಯಿಸಲಾಯಿತು. ನಂತರ ಗ್ರಾಮ ಪಂಚಾಯತಿ ಸದಸ್ಯರು ತಮ್ಮ ವಾರ್ಡುಗಳಲ್ಲಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧ್ಯಕ್ಷರಲ್ಲಿ, ಪಿಡಿಓ ಅಧಿಕಾರಿಗಳಿಗೆ ಒತ್ತಾಯಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಭಜಂತ್ರಿರಮೇಶ, ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿ ವೀರೇಶಗೌಡ ಹಾಗೂ ಸಿಬ್ಬಂದಿಯವರು ಇದ್ದರು. 

Attachments area