ಮುದಗಲ್: ಸಮೀಪದ ಹೂನೂರು ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಜಲ ಜೀವನ್ ಮಿಷನ್ ಯೋಜನೆಯಡಿ ರೂ. ೫೦ ಲಕ್ಷ ಮೊತ್ತದ ಮನೆ ಮನೆಗೆ ಸರಬರಾಜು ಮಾಡುವ ಕುಡಿವ ನೀರಿನ ಪೈಪ್ ಕಾಮಗಾರಿ ನಡೆದಿದೆ. ಮಂದಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಪೈಪ್ ಲೈನ್ ಗೆ ತೆಗೆದ ತೆಗ್ಗು ಸಂಚಾರಕ್ಕೆ ತೊಂದರೆ ತೊಂದರೆ ಉಂಟುಮಾಡಿದೆ. ಗುತ್ತೇದಾರ ನಿರ್ಲಕ್ಷ್ಯ ದಿಂದ ರಾತ್ರಿ ವೇಳೆ ಬಡಾವಣೆಗಳಲ್ಲಿ ಸಂಚಾರ ಮಾಡಲು ಮಕ್ಕಳಿಗೆ ಹಾಗೂ ವೃದ್ಧರಿಗೆ ತೊಂದರೆಯಾಗಿದೆ.
ಅಹಿತಕರ ಘಟನೆ ನಡೆಯುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಬಿರುಕು ಬಿಟ್ಟ ತೆಗ್ಗುಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಹೂನೂರು ಗ್ರಾಮಸ್ಥರು ಒತ್ತಾಯ ಮಾಡಿದರು
“ಹೂನೂರು ಗ್ರಾಮದಲ್ಲಿ ನಡೆಯುತ್ತಿರುವ ಕುಡಿವ ನೀರಿನ ಯೋಜನೆ ಕಾಮಗಾರಿ ಅಂದಾಜು ಪತ್ರದಂತೆ ನಡೆಯುತ್ತಿಲ್ಲ. ಕಾಮಗಾರಿ ನಿಧಾನವಾಗಿ ನಡೆಸಿದೆ ಗುತ್ತೇದಾರ ವಿರುದ್ಧ ಅಧಿಕಾರಿಗಳು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು”. ಬಾಲಸ್ವಾಮಿ ಕಟ್ಟಿಮನಿ ಹೂನೂರು ಗ್ರಾಮಸ್ಥ.