ಜೆಇಇ ಮೇನ್ಸ್ :ಎಸ್‍ಬಿಆರ್ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

ಕಲಬುರಗಿ ಜು 13: ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಜೂನ್ ತಿಂಗಳಿನಲ್ಲಿನಡೆದ ಜೆಇಇ 2022 ಮೇನ್ಸ್ ಪ್ರಥಮ ಹಂತದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.ನಾಗಶೆಟ್ಟಿ ಬಿರಾದಾರ 97.1624402 ಪರ್ಸೆಂಟೈಲ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.31 ವಿದ್ಯಾರ್ಥಿಗಳು 90 ಪರ್ಸೆಂಟೈಲ್‍ಗಿಂತ ಅಧಿಕ ಅಂಕ ಪಡೆದಿದ್ದಾರೆ.
ಜೆಇಇ ಮೇನ್ಸ್ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತಿದ್ದು,. ಈ
ಎರಡೂ ಹಂತಗಳಲ್ಲಿಯ ಪರ್ಸೆಂಟೈಲ್‍ಗಳನ್ನು ಪರಿಶೀಲಿಸಿ, ಎರಡೂ
ಹಂತಗಳಲ್ಲಿನ ಅತಿ ಹೆಚ್ಚಿನ ಪರ್ಸೆಂಟೈಲ್‍ನ್ನು ಪರಿಗಣಿಸಿ ಜೆ.ಇ.ಇ: ಅಡ್ವಾನ್ಸಡ್ ಪರೀಕ್ಷೆ
ಬರೆಯಲು ಪ್ರವೇಶ ನೀಡಲಾಗುತ್ತದೆ ಹಾಗೂ ದೇಶದ ಪ್ರತಿಷ್ಟಿತ ಎನ್.ಐ.ಟಿ
ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಎಸ್.ಬಿ.ಆರ್ ಕಾಲೇಜಿನ
1ನೇ ಹಂತ ಜೆ.ಇ.ಇ. ಮೇನ್ಸ್ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ
ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸಡ್ ಪರೀಕ್ಷೆಗೆ
ಅರ್ಹತೆಯನ್ನು ಪಡೆಯುವ ನೀರಿಕ್ಷೆಯಿದೆ. ಎರಡನೇ ಹಂತದ ಪರೀಕ್ಷೆಯು
ಇದೇ ಜುಲೈ ತಿಂಗಳಲ್ಲಿ ನಡೆಯುವುದು.
ಎಸ್ ಬಿ ಆರ್ ಕಾಲೇಜಿನ ಫೇಸ್-1 ಫಲಿತಾಂಶದ ವಿವರ ಹೀಗಿದೆ:
ನಾಗಶೆÀಟ್ಟಿ ಬಿರಾದರ 97.1624402 ಪರ್ಸೆಂಟೈಲ್,ಜೈಪಾಲ ರೆಡ್ಡಿ ಸಂಜೀವ ರೆಡ್ಡಿ 96.1250977,ವೇದಾಂತ ಮಹೇಶ ಸಾರಡಾ 96.0708365,ವೈಷ್ಣವಿ ಶೆಟಗಾರ 96.0647712,ನಿಶಿಕಾ ಕೇದಾರನಾಥ 95.0599859,ಚಾಮುಂಡಿ ಚಂದ್ರಕಾಂತ 94.9328203,ಗುರುಪ್ರಸಾದ ಚಿಕ್ಕಮಠ 94.9081738,ಗುರುರಾಜ ಖುರ್ದ 94.9081738, ವಿರೇಶ ನೀಲಕಂಠ 94.9016854,ವಿಕಾಶ ಬಿರಾದಾರ 94.5947623, ಮಹೇಶ ಲೇಂಗಟಿ 94.5942142, ಅಣ್ಣಾರಾವ್ ಪಾಟೀಲ 94.0919105 ಪರ್ಸೆಂಟೈಲ್ ಪಡೆದಿದ್ದಾರೆ.
31 ವಿದ್ಯಾರ್ಥಿಗಳು 90 ಕ್ಕೂ ಅಧಿಕ ಪರ್ಸೆಂಟೈಲ್,33 ವಿದ್ಯಾರ್ಥಿಗಳು 80-90 ಪರ್ಸೆಂಟೈಲ್,9 ವಿದ್ಯಾರ್ಥಿಗಳು 75-80 ಪರ್ಸೆಂಟೈಲ್ ಮತ್ತು 56 ವಿದ್ಯಾರ್ಥಿಗಳು
50-75 ಪರ್ಸೆಂಟೈಲ್ ಪಡೆದಿದ್ದಾರೆ
ವಿದ್ಯಾರ್ಥಿಗಳ ಸಾಧನೆಗೆ ಶರಣಬಸವೇಶ್ವರವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು,ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಪ್ರಾಚಾರ್ಯರು.ಅಧ್ಯಾಪಕವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.


ಪ್ರತಿಭಾನ್ವಿತ ವಿದ್ಯಾರ್ಥಿಗಳ ಈ ಸಾಧನೆ ಅನನ್ಯವಾಗಿದೆ.ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ.ಗುರುಶಿಷ್ಯರ ಶ್ರಮ ಸಂಸ್ಕøತಿಗೆ ದೊರೆತ ಫಲಿತಾಂಶ ಇದಾಗಿದೆ.ಭವಿಷ್ಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಇವರು ಅತಿ ಹೆಚ್ಚಿನ ಅಂಕಗಳನ್ನು ಪಡೆಯಲಿ.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ. ಅಧ್ಯಕ್ಷರು, ಶರಣಬಸವೇಶ್ವರ
ವಿದ್ಯಾವರ್ಧಕ ಸಂಘ, ಕಲಬುರಗಿ.