ಜೆಇಇ (ಮೇನ್ಸ್)ಪರೀಕ್ಷೆ:ಶ್ರೀಗುರು ಕಾಲೇಜು ಅದ್ಭುತ ಸಾಧನೆ

ಕಲಬುರಗಿ ಜು 13: ನಗರದ ಶ್ರೀ ಗುರು ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಇಇ ( ಮೇನ್ಸ್) 2022 ಮೊದಲನೆ ಸುತ್ತಿನ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್‍ಗಳನ್ನು ಪಡೆದುಕೊಂಡು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳಾದ ವಿಜಯಶ್ರೀ ವಿ, ಎಂ.97.32 ಪಸೆರ್ಂಟೈಲ್,ಸಾವನ ಸಂಜುಕುಮಾರ93.4 ಪಸೆರ್ಂಟೈಲ್,ನೀರಜ ಬಡಿಗೇರ92.5 ಪಸೆರ್ಂಟೈಲ್ (ಪ್ರತಿಶತ) ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ, ಸಂಸ್ಥೆಯ ಅಧ್ಯಕ್ಷರಾದ ನಳಿನಿ ಎ.ನಾಯ್ಕ, ಕಾರ್ಯದರ್ಶಿಗಳಾದ ನಿತೀನ ನಾಯ್ಕ, ಆಡಳಿತಾಧಿಕಾರಿಗಳಾದ ನೇಹಾ ಎನ್. ನಾಯ್ಕ್,ಸದಸ್ಯರಾದ ಗುರುರಾಜನಾಯ್ಕ, ಕಾಲೇಜಿನ ಪ್ರಾಚಾರ್ಯರಾದ ವಿದ್ಯಾಸಾಗರ ಗೋಗಿ, ಕಾಲೇಜಿನ ಬೋಧಕ ಬೋಧಕೇತರ ವರ್ಗ,ಆಡಳಿತ ಮಂಡಳಿಯ ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.