ಜೆಇಇ ಮೇನ್ಸ್‍ನಲ್ಲಿ ಆರ್.ವಿ.ವಿದ್ಯಾರ್ಥಿಗಳ ಸಾಧನೆ

ಯಾದಗಿರಿ,ಜು.13-ನಗರದ ಪ್ರತಿಷ್ಠಿತ ಆರ್.ವಿ.ವಿದ್ಯಾ ಸಂಸ್ಥೆಯು ಶೈಕ್ಷಣಿಕ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವುದರೊಂದಿಗೆ ಪ್ರಸಕ್ತ ಸಾಲಿನ 2022ರ ದ್ವಿತೀಯ ಪಿ.ಯು.ಸಿ. ಫಲಿತಾಂಶವು ಜಿಲ್ಲೆಗೆ ದ್ವಿತೀಯ ಮತ್ತು ಪಿಸಿಎಂಬಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ತಂದು ಕೊಡುವಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದ್ದು, ಇದರೊಂದಿಗೆ ವಿದ್ಯಾರ್ಥಿಗಳು ಉನ್ನತ ಮಟ್ಟದ ಅಭ್ಯಾಸಕ್ಕಾಗಿ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸಗಳಲ್ಲಿ ಒಂದಾದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
ಕು.ವರ್ಷಾ ತಂದೆ ಸಂಜಯ ವಿದ್ಯಾರ್ಥಿನಿ ಶೇ.82.68 ಪ್ರತಿಶತ ಅಂಕ ಪಡೆದಿದ್ದಾಳೆ. ಇನ್ನೋರ್ವ ವಿದ್ಯಾರ್ಥಿ ರೈತನ ಮಗನಾಗಿರುವ ಪ್ರಕಾಶ ತಂದೆ ದಂಡಪ್ಪ ಶೇ.80.79 ಪ್ರತಿಶತ ಅಂಕ ಪಡೆದಿದ್ದಾನೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಕಮಲಾ ದೇವರಕಲ್, ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.