
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಜೆಇಇ ಯು ನಿರ್ವಹಿಸಿದ 2023ರ ಪರೀಕ್ಷೆಯಲ್ಲಿ (ಬೆಸ್ಟ್) ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ
ಸೌಮ್ಯಾ ಭಾರತಿ 98.90, ಅರ್ಪಿತಾ ಸಿಂಘಿ 98.46 ಇವರಿಬ್ಬರು ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ, ಸ್ನೇಹಾ ಜೆ 9449, ಸ್ಪಂದನಾ ಎನ್ 87.27 ಎಂ ಸಾಯಿ ಹರ್ಷಾ 86.60 ಎಜೆ ದೀಕ್ಷಾ 86.16, ಮಂಜುನಾಥ ಗೌಡ 86.12, ಸಾಗರ್ ವಿ 83.01, ಜಿ ಗವಿಸಿದ್ದಾ 81.14, ಶ್ರಿ ನಯನಾ ಕನಪರ್ತಿ 80,66 ಪಡೆದು ಕಾಲೇಜ್ ಟಾಪರ್ ಆಗಿ ಕೀರ್ತಿತಂದಿದ್ದಾರೆ. ಬೆಸ್ಟ್ ಕಾಲೇಜಿನಿಂದ 30 ವಿದ್ಯಾರ್ಥಿಗಳು ಅರ್ಹತೆ ಪಡೆದು, ಜೆಇಇ ಅಡ್ವಾನ್ಸ್ ನಲ್ಲಿ ಅರ್ಹತೆಯನ್ನು ಪಡೆದಿರುತ್ತಾರೆಂದು ಕಾಲೇಜಿನ ಪ್ರಾಚಾರ್ಯ ಕೆ. ವೆಂಕಟೇಶ್ವರರಾವ್ ಪ ತಿಳಿಸಿದ್ದಾರೆ.
ಬೆಸ್ಟ್ ಸಂಸ್ಥೆಯ ಅಧ್ಯಕ್ಷ ಕೋನಂಕಿ ರಾಮಪ್ಪ, ಉಪಾಧ್ಯಕ್ಷ ಕೋನಂಕಿ ತಿಲಕ್ ಕುಮಾರ್, ಕಾರ್ಯದರ್ಶಿ ಮನ್ನೆ ಶ್ರೀನಿವಾಸುಲು, ರಾಮರಾಯುಡು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.