ಜೆಇಇ ಅಡ್ವಾನ್ಸ್ : 1098 ನೇ ರ್ಯಾಂಕ್ ಪಡೆದ ಗುರು ನಾನಕ ವಿದ್ಯಾರ್ಥಿ

ಬೀದರ:ಜೂ.21:ಗುರುನಾನಕ ಸ್ವಾತಂತ್ರ ಪದವಿ ಪೂರ್ವ ವಿದ್ಯಾಲಯದÀ ಪ್ರತಿಭಾವಂತ ವಿದ್ಯಾರ್ಥಿ ವಿವೇಕಾನಂದ ದಂಡಿನ್ ಅವರು ಜೆಇಇ ಅಡ್ವಾನ್ಸ್ ರಾಷ್ಟ್ರಕ್ಕೆ 1098ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ದಿನಾಂಕ 20-06-2023 ರಂದು ಗುರು ನಾನಕ ಪಿ.ಯು. ಕಾಲೇಜಿನಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ವಿವೇಕಾನಂದ ದಂಡಿನ ಮಾತನಾಡುತ್ತ ಕಾಲೇಜಿನಲ್ಲಿರುವ ಶೈಕ್ಷಣಿಕ ವಾತಾವರಣ, ಉತ್ತಮ ಬೋಧನೆ ಹಾಗೂ ಆಡಳಿತ ವರ್ಗ ಕಾಳಜಿ ವಹಿಸುತ್ತಾರೆ ಎಂದು ನುಡಿದರು.

ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ವಿಶೇಷ ಬೋಧನೆಯ ವ್ಯವಸ್ಥೆ ಮಾಡಲಾಗಿದೆ. ಕಾಳಜಿಯಿಂದ ಕಲಿಸುವ ಉಪನ್ಯಾಸಕರಿದ್ದಾರೆ. ಆಡಳಿತ ವರ್ಗವೂ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ಸತತ ನಿಗಾ ಇಡುತ್ತಿದೆ. ಇದೆಲ್ಲದರ ಫಲವಾಗಿ ಕಾಲೇಜಿಗೆ ಉತ್ತಮ ಫಲಿತಾಂಶ ಬರುತ್ತಿದೆ. ಗುರು ನಾನಕ ಸಂಸ್ಥೆಯು ಆರಂಭದಿಂದಲೂ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತಿದೆ. ಅದರ ಫಲವಾಗಿ ಸಾವಿರಾರು ವಿದ್ಯರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಹೇಳಿದ್ದಾರೆ.

ರಾಷ್ಟ್ರಮಟ್ಟದಲ್ಲಿ 1098 ನೇ ರ್ಯಾಂಕ್ ಪಡೆದ ವಿವೇಕಾನಂದ ದಂಡಿನ್ ಅವರನ್ನು ಕಾಲೇಜಿನಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಪ್ರಾಚಾರ್ಯರು, ಉಪನ್ಯಾಸಕರು, ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮತ್ತಿತರ ಗಣ್ಯರು ಈ ವಿದ್ಯಾರ್ಥಿಯ ಸಾಧನೆಯನ್ನು ಕೊಂಡಾಡಿದ್ದಾರೆ.