ಜೂ. 8 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ:ಜೂ.07:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲಗಳಲ್ಲಿ ಒಂದಾದ ಬೆಣ್ಣೆತೋರಾ ನದಿಯ ಮೇಲ್ಬಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಣ್ಣು ಮಿಶ್ರಿತ ನೀರು ಸರಬರಾಜು ಆಗುತ್ತಿದೆ. ಇದರ ಹಿನ್ನೆಲೆಯಲ್ಲಿ ಬೆಣ್ಣೆತೋರಾ ಪಂಪ್‍ಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಜೆಸ್ಕಾಂ ವತಿಯಿಂದ ದುರಸ್ಥಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಇದೇ ಜೂನ್ 8 ರಂದು ಹಳೇ ಜಲ ಶುದ್ಧೀಕರಣ ಘಟಕದಿಂದ ಸರಬರಾಜಾಗುವ ಈ ಕೆಳಕಂಡ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಸಿ, ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಮೋಮಿನಪೂರಾ ಮೇಲ್ಮಟ್ಟ ಜಲಸಂಗ್ರಹಗಾರ, ಸೂಪರ್ ಮಾರ್ಕೇಟ್‍ನ ಹಳೇ ಎಸ್.ಪಿ. ಆಫೀಸ್ ಮೇಲ್ಮಟ್ಟ ಜಲಸಂಗ್ರಾಹಗಾರ, ಹಳೇ ಡಿ.ಸಿ. ಆಫೀಸ್ ಮೇಲ್ಮಟ್ಟ ಜಲಸಂಗ್ರಹಗಾರ, ಪೊಲೀಸ್ ಕ್ವಾರ್ಟರ್‍ನ ಮೇಲ್ಮಟ್ಟ ಜಲಸಂಗ್ರಹಗಾರ, ಐವಾನ್ ಶಾಹಿ ಮೇಲ್ಮಟ್ಟ ಜಲಸಂಗ್ರಹಗಾರ, ಸಾಯಿನಗರ ಮೇಲ್ಮಟ್ಟ ಜಲಸಂಗ್ರಹಗಾರ, ಪಶುಸಂಗೋಪನಾ ಆಸ್ಪತ್ರೆಯ ಮೇಲ್ಪಟ್ಟ ಜಲಸಂಗ್ರಹಗಾರ, ಜಿಮ್ಸ್ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆ, ಶಹಾಬಜಾರ ಮೇಲ್ಮಟ್ಟ ಜಲಸಂಗ್ರಹಗಾರ ಹಾಗೂ ಡೆಮೋ ಜೋನ್ (24/7) ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಸಾರ್ವಜನಿಕರು ಕಲಬುರಗಿ ಮಹಾನಗರ ಪಾಲಿಕೆ, ಕೆಯುಡಿಐಎಫ್‍ಸಿ ಹಾಗೂ ಎಲ್. ಆಂಡ್ ಟಿ ಲಿಮಿಟೆಡ್ ಇವರೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.