ಜೂ.6 ರಂದುಶಂಕರಲಿಂಗೇಶ್ವರ 94 ನೇ ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಭೆ

Oplus_131072

ತಾಳಿಕೋಟೆ:ಜೂ.2: ಜೂ. 6 ರಂದು ಸಮಿಪದ ಕೆಸರಟ್ಟಿ ಗ್ರಾಮದ ಶ್ರೀ ಶಂಕರಲಿಂಗ ಗುರುಪೀಠ ಮಹಾಸ್ಥಾನ ಮಠದಲ್ಲಿ ಘೋರ ತಪಸ್ವಿ ಶ್ರೀ ಶ್ರೀ ಶ್ರೀ ಶಂಕರಲಿಂಗೇಶ್ವರ ಮಹಾಸ್ವಾಮಿಗಳ 94 ನೇಯ ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಭೆ ಸಾವಿರಾರು ಭಕ್ತ ಸಮೂಹದಲ್ಲಿ ಜರುಗಲಿದೆ.
ಈ ಜಾತ್ರೆಯಲ್ಲಿ ಪಿಕೆ ರೆಕಾರ್ಡಿಂಗ ಸ್ಟುಡಿಯೋ ಬಾಗಲಕೋಟ ಇವರಿಂದ ಪವಾಡ ಪುರುಷ ಶ್ರೀ ಶಂಕರಲಿಂಗೇಶ್ವರ ಭಕ್ತಿಗೀತೆ ಆಡಿಯೋ ಬಿಡುಗಡೆ ಹಾಗೂ ಶ್ರೀ ಶಂಕರಲಿಂಗ ಮಹಾಸ್ವಾಮಿಗಳ ತೈಲವರ್ಣ ಕಲಾಕೃತಿ ಭಾವಚಿತ್ರ ಲೋಕಾರ್ಪಣೆ, ಬಾಲ ತಪಸ್ವಿ ಪರಮಪೂಜ್ಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳ 18 ನೇ ತುಲಾಭಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಜೋತೆಗೆ ಧರ್ಮಸಭೆ ಜರುಗಲಿದೆ.
ಈ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಸೋಮಲಿಂಗ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದು ಯರನಾಳ ಪರಮಪೂಜ್ಯ ಗುರು ಸಂಗನಬಸವ ಮಹಾಸ್ವಾಮಿ ದಿವ್ಯ ಸಮ್ಮುಖ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಅವರು ನೆರವೇರಿಸುವರು.
ಅಧ್ಯಕ್ಷತೆಯನ್ನು ಬಾಗಲಕೋಟೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಅತಿಥಿಗಳಾಗಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ), ಕೈಲಾಸ ಪಡತರೆ, ಹುಸೇನ ಸೋಲಾಪೂರ ಗ್ರಾ.ಪಂ ಅಧ್ಯಕ್ಷ ಕೊಂಡಗೂಳಿ ಆಗಮಿಸುವರು.
ಪ್ರತಿ ವರ್ಷ ಕೋಡಮಾಡುವ ಶ್ರೀ ಶಂಕರಲಿಂಗ ತಪಸ್ವಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಚಿತ್ರನಟ ನಿರ್ಮಾಪಕ ಬೆಳಗಾವಿಯ ರಾಜಕುಮಾರ, ಪುಂಡಲೀಕ ಲಮಾಣಿ ಬಾಗಲಕೋಟ ಖ್ಯಾತ ಗಾಯಕ, ಕೆ ಗಂಗಾಧರ ಕಲಾವಿಧರು ಬ.ಬಾಗೇವಾಡಿ, ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪೂಜ್ಯರ ಆಶಿರ್ವಾದದಿಂದ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ ಜರುಗಲಿದೆ.
ಜೂ 7 ರಂದು ಅಮೃತ ಘಳಿಗೆಯಲ್ಲಿ ಗಂಗಸ್ಥಳ ಪೂಜೆಯೊಂದಿಗೆ ಅಮೋಘಸಿದ್ದೇಶ್ವರ ವಿಶೇಷ ಹೇಳಿಕೆ ಜರುಗಲಿದೆ, ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಜರಗಲಿದೆ. ಎಂದು ಬಾಲ ತಪಸ್ವಿ ಸೋಮಲಿಂಗ ಸ್ವಾಮೀಜಿ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.