ಜೂ.4 ಕೇರಳಕ್ಕೆ ಮುಂಗಾರು ಪ್ರವೇಶ

ನವದೆಹಲಿ, ಮೇ 16- ಮುಂದಿನ ತಿಂಗಳು ಜೂನ್ 4 ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಲಿದೆ.
ಈ ಕುರಿತು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರತಿ ಬಾರಿಯೂ ವಾಡಿಕೆಯಂತೆ ಜೂನ್ ಒಂದರಂದು ಮುಂಗಾರು ಮಳೆ ಕಾಲಿಡಲಿದೆ. ಆದರೆ ಈ ಬಾರಿ ಒಂದು ವಾರ ವಿಳಂಬವಾಗುವ ಸಾಧ್ಯತೆಯಿದೆ.
ಹೀಗಾಗಿ ನಾಲ್ಕು ದಿನ ತಡವಾಗಿ ಕೇರಳದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಮೇ 29 ರಂದು ಮುಂಗಾರು ಮಳೆ ಪ್ರವೇಶಿಸಿತ್ತು. ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಈ ಮೊದಲು ತಿಳಿಸಿತ್ತು.