ಜೂ.4ರವರೆಗೂ ಮತಮುದ್ರೆ ಬಿಗಿ ಭದ್ರ

ಸಂಜೆವಾಣಿ ನ್ಯೂಸ್
ಮೈಸೂರು: ಏ.29:- ಮೈಸೂರು- ಕೊಡಗು ಲೋಕಸಬಾ ಕ್ಷೇತ್ರದ ಚುನಾವಣೆಗೆ ಮತದಾನ ಪಕ್ರಿಯೆ ಪೂರ್ಣಗೊಂಡಿದ್ದು, ಚುನವಾಣೆಯಲ್ಲಿ ಬಳಕೆಯಾದ ಮತಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ.
ಶುಕ್ರವಾರ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾದ ನಂತರ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇವಿಎಂಗಳನ್ನು ಸೀಲ್ ಮಾಡಿ, ಆಯಾಯ ಮಸ್ಟರಿಂಗ್ ಕೇಂದ್ರಗಳಿಗೆ ಸುರಕ್ಷಿತವಾಗಿ ಸಾಗಿಸಿದರು. ಅಲ್ಲಿ ಪರಿಶೀಲಿಸಿದ ನಂತರ ಮತ ಎಣಿಕೆ ಕೇಂದ್ರವಾದ ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಇಡಲಾಯಿತು. ಕೆಲ ಮಸ್ಟರಿಂಗ್ ಕೇಂದ್ರಗಳಿಂದ ಇವಿಎಂ ತರುವುದು ವಿಳಂಬವಾಗಿದ್ದರಿಂದ ರಾತ್ರಿ ಬಹು ಹೊತ್ತಿನವರೆಗೂ ಪ್ರಕ್ರಿಯೆ ನಡೆಯಿತು. ಸ್ಟ್ರಾಂಗ್ ರೂಂಗೆ ಇವಿಎಂಗಳನ್ನು ತಂದ ಸಿಬ್ಬಂದಿಗಳಿಗೆ ಗುಲಾಬಿ ನೀಡಿ, ಸ್ವಾಗತಿಸಲಾಯಿತು. ಮೂರು ಹಂತದಲ್ಲಿ ಭದ್ರತೆ: ಮತ ಯಂತ್ರಗಳಿಗೆ ಕೊಠಡಿ ಇರುವ ಕಟ್ಟಡಕ್ಕೆ ಮೂರು ಹಂತದಲ್ಲಿ ಭದ್ರತೆ ಕಲ್ಪಿಸಲಾಗಿದ್ದುಘಿ, ಸ್ಟ್ರಾಂಗ್ ರೂಂ ಸುತ್ತ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮೊದಲ ಹಂತದಲ್ಲಿ ಕೇಂದ್ರದ ಅರೆ ಸೇನಾ ಪಡೆ, ಎರಡನೇ ಹಂತದಲ್ಲಿ ರಾಜ್ಯ ಮೀಸಲು ಪೆÇಲೀಸ ಪಡೆ ಇದ್ದು, ಮೂರನೇ ಹಂತವಾಗಿ ಕಟ್ಟಡಸ ಸುತ್ತ ಸಿವಿಲ್ ಪೆÇೀಲಿಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 150 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದ್ದುಘಿ, 28 ಸ್ಟ್ರಾಂಗ್ ರೂಮ್ ಗಳಲ್ಲಿ 28 ಸಿಸಿ ಕ್ಯಾಮರಾದ ಕಣ್ಗಾವಲು ಇರಿಸಲಾಗಿದೆ. ಮತ ಎಣಿಕೆಯ ದಿನವಾದ ಜೂನ್ ನಾಲ್ಕರವರೆಗೂ ಬಿಗಿ ಭದ್ರತೆ ನೀಡಲಾಗಿದೆ.
ಇವಿಎಂ, ವಿವಿ ಪ್ಯಾಟ್ ಇರುವ ರೂಂಗಳಿಗೆ ಮೂರು ಹಂತದಲ್ಲಿ ಭದ್ರತೆ ಇರಲಿದೆ. ಪ್ರತಿ ಶ್‍ಟಿ ನಲ್ಲಿ 60 ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಲಾಗುತ್ತಿದೆ. ಎಣಿಕೆ ದಿನದವರೆಗೆ ಸ್ಟ್ರಾಂಗ್ ರೂಂಗೆ ಯಾರಿಗೂ ಅವಕಾಶ ಇರುವುದಿಲ್ಲ . ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಎಲ್ಲಿಯೂ ದೂರು ದಾಖಲಾಗಿಲ್ಲ. 65 ವಿವಿ ಪ್ಯಾಟ್ ಗಳನ್ನ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರ ಪೆÇಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಎಂ.ಮುತ್ತು ರಾಜ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಹೇಶ್ ಇದ್ದರು.