ಜೂ.30 ರೊಳಗೆ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ಮಾಡಿ ಇಕೆವಿಸಿ ಮಾಡಿಸಲು ರೈತರಿಗೆ ಸಲಹೆ 

ಜಗಳೂರು.ಜೂ.೨೧ :- ತಾಲ್ಲೂಕಿನಲ್ಲಿ 11900 ರೈತರು ಇಕೆವೈ ಸಿ ಮಾಡದಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದೆ. ಇ-ಕೆವೈಸಿ ಮಾಡದ ರೈತರು ಜೂನ್ 30 ರೊಳಗೆ ಹತ್ತಿರ ವಿರುವ ಆರ್.ಎಸ್.ಕೆ. ಕೇಂದ್ರಕ್ಕೆ ಬೇಟಿ ಮಾಡಿ ಇಲ್ಲವಾದರೆ ಸೇವಾ ಸಿಂಧು ಕೇಂದ್ರಕ್ಕೆ ಬೇಟಿ ಕೊಟ್ಟು ಮಾಡಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಥನ್‌ ಕಿಮಾವತ್ ರೈತರಲ್ಲಿ ಮನವಿ ಮಾಡಿದ್ದಾರೆ. ತಾಲ್ಲೂಕಿನ ದೇವಿಕೆರೆ ಗ್ರಾಮದಲ್ಲಿ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಯೋಜನೆಗೆ, ಇ-ಕೆವೈಸಿ ಮಾಡದ ರೈತರನ್ನು ಸಂಪರ್ಕಿಸಿ ಸ್ಥಳದಲ್ಲೇ ಆಧಾರ್‌ ಕಾರ್ಡ್, ಎಂಟ್ರಿ ಕಣ್ಣು ಪೋಟೋ ಸ್ಥಳದಲ್ಲೇ ಪೋಟೋ ತೆಗೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಂತಹ ರೈತರ ಲೀಸ್ಟ್ ತೆಗೆದುಕೊಂಡು ಕೃಷಿ ಇಲಾಖೆಯ ವತಿ ಯಿಂದ ಅಂತಹ ರೈತರನ್ನು ಸಂಪರ್ಕಿಸಿ ಇ-ಕೆವೈಸಿ ಮಾಡಲಾಗುತ್ತಿ ದೆ. ರೈತರಿಗೆ ಹತ್ತಿರವಿರುವ ಆರ್.ಎಸ್.ಕೆ. ಕೇಂದ್ರಕ್ಕೆ ಬೇಟಿ ಮಾಡಿ ಇಲ್ಲವಾದರೆ ಸೇವಾಸಿಂಧು ಕೇಂದ್ರದಲ್ಲಿ ಮಾಡಿಸಬೇಕು.ಗ್ರಾಮ ಒನ್ ಇಲ್ಲವಾದರೆ ಸಾಮಾನ್ಯ ಸೇವಾ ಕೇಂದ್ರದಿoದ ಬರುವ ಪಿಎಂ. ಕಿಸಾನ್ ಯೋಜನೆಯಿಂದ ಹಣ ಬರುವುದಿಲ್ಲ ಎಂದು ಕೃಷಿ ಅಧಿ ಕಾರಿಗಳು ತಿಳಿಸಿದ್ದಾರೆ.2019 ರೊಳಗೆ ಪಿಎಂ. ಕಿಸಾನ್ ಯೋಜನೆ ಪಡೆದ ರೈತರು ಮೃತ ಪಟ್ಟು ತಮ್ಮ ಮಕ್ಕಳಿಗೆ ಅಥವಾ ಕುಟುಂಬದವರಿಗೆ ಖಾತೆ ಮಾಡಿಸಿ ಕೊಂಡಿದ್ದ ರೈತರಿಗೆ ಈ ಹಣ ಬರುತ್ತದೆ. 2019 ರ ನಂತರ ಹೊಸ ದಾಗಿ ಖಾತೆ ಮಾಡಿಸಿದ ರೈತರಿಗೆ ಸದ್ಯ ಅವಕಾಶ ಕೊಟ್ಟಿಲ್ಲ ಎಂದು ಕೆಲವು ರೈತರು ಕೇಳಿದ ಪ್ರಶ್ನೆಗಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಿಳಿಚೋಡು ಕೃಷಿ ಅಧಿಕಾರಿ ಹರ್ಷ, ಪ್ರಕಾಶ್ ಸೇರಿದಂತೆ ಸಾರ್ವಜನಿಕರು ಇದ್ದರು.