ಜೂ. 3 ಹಾಗೂ 4 ರಂದು ಜಿಲ್ಲೆಯ ಎಲ್ಲಾ ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ಚಾಲಕರು ಕೋವಿಡ್ ಲಸಿಕೆ ಪಡೆಯಲು ಸೂಚನೆ

ಕಲಬುರಗಿ.ಜೂ.2:ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ವಾಹನ ಚಾಲಕರನ್ನು ರಾಜ್ಯ ಕೊರೋನಾ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾಗಿದೆ. ಆದ್ದರಿಂದ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ 18 ರಿಂದ 44 ವಯೋಮಾನದ ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ವಾಹನ ಚಾಲಕರುಗಳಿಗೆ ಜೂನ್ 3 ಹಾಗೂ 4 ರಂದು ಎರಡು ದಿನ ಕಾಲ ಕಲಬುರಗಿಯ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿ (ಹಳೆ ಆರ್.ಟಿ.ಓ. ಕಚೇರಿ) ಯಲ್ಲಿ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಲಬುರಗಿ ನಗರದಲ್ಲಿರುವ ಎಲ್ಲಾ ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ವಾಹನ  ಚಾಲಕರು ನಮೂನೆ-3ರೊಂದಿಗೆ ಚಾಲನಾ ಅನುಜ್ಞಾ ಪತ್ರ ಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ  2021ರ ಜೂನ್ 3 ಹಾಗೂ  4 ರಂದು ಮೇಲ್ಕಂಡ ಕಚೇರಿಗೆ ಹಾಜರಾಗಿ ಲಸಿಕೆಯನ್ನು ಪಡೆಯಬಹುದಾಗಿದೆ.   

    ಅದರಂತೆ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಾಸವಾಗಿರುವ ಅರ್ಹ ಎಲ್ಲಾ ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ವಾಹನ ಚಾಲಕರುಗಳು ತಮ್ಮ ತಾಲೂಕಿನ ವೈದ್ಯಾಧಿಕಾರಿಗಳನ್ನು ಡಿಎಲ್ ಮತ್ತು ಆಧಾರ್ ಕಾರ್ಡ್‍ನೊಂದಿಗೆ ಮತ್ತು ನಮೂನೆ-3 ದಾಖಲೆಗಳೊಂದಿಗೆ ಸಂಪರ್ಕಿಸಿ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.