ಶಹಾಪುರ: ಮೇ.31:ಕರ್ನಾಟಕ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ನೂತನ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನೇತೃತ್ವದಲ್ಲಿ ಜೂ.3ರಂದು ಕ್ಷೇತ್ರದ ಮತದಾರರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಕಾಂಗ್ರೆಸ್ ವತಿಯಿಂದ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ . ಆದರೆ ಬರುವಾಗ ಹಾರ, ಶಾಲು ಸ್ವೀಕರಿಸುವುದಿಲ್ಲ, ಯಾರು ದಯವಿಟ್ಟು ತರಬಾರದು ಎಂದು ನೂತನ ಸಚಿವ ಶರಣಬಸಪ್ಪಗೌಡ ದರ್ಶನಾಪುರ ವಿಶೇಷ ಸೂಚನೆ ನೀಡಿದ್ದಾರೆ.
ಜೂನ್ 3 ರಂದು ಬೆಳಗ್ಗೆ 11ಗಂಟೆಗೆ ಆಯೋಜಿಸಿದ್ದು, ಅದಕ್ಕೆ ಶಹಾಪುರ ಮತಕ್ಷೇತ್ರದ ನಗರಸಭೆ ಅಧ್ಯಕ್ಷರು ಸದಸ್ಯರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸದಸ್ಯರು ತಾಲೂಕ ಪಂಚಾಯತ ಅಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಹಲವಾರು ಘಟಕದ ಅಧ್ಯಕ್ಷರು ಸದಸ್ಯರು ಗಣ್ಯರು ಹಿರಿಯರು ಯುವಕರು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ದರ್ಶನಾಪುರ ಅಭಿಮಾನಿಗಳು ಭಾಗವಹಿಸಲು ವಿನಂತಿಸಲಾಗಿದೆ