ಜೂ. 27, ನಾಡಪ್ರಭು ಕೆಂಪೇಗೌಡರ ಜಯಂತಿ

ಕೋಲಾರ,ಜೂ.೧೭: ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಸರ್ಕಾರದ ವತಿಯಿಂದ ಜೂನ್ ೨೭ ರಂದು ಮಂಗಳವಾರ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಂಕರಪ್ಪ ಹೇಳಿದರು.
ನಗರದ ಒಕ್ಕಲಿಗರ ವಿದ್ಯಾರ್ಥಿ ನಿಲಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಪ್ರಥಮವಾಗಿ ಬಹಳ ವೈಭವದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ಅವಕಾಶ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಸಿಕ್ಕಿರುವುದು ಸಂತಸ ತಂದಿತ್ತು ಎಂದರು.
ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಣೆ ಮಾಢಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ ಅವರು ಜೂನ್ ೨೭ ರಂದು ಕೆಂಪೇಗೌಡ ಜಯಂತಿ ಪ್ರಯುಕ್ತ ಅಂದು ಬೆಳಗ್ಗೆ ೧೦-೩೦ ಗಂಟೆಗೆ ಪಲ್ಲಕ್ಕಿಗಳ ಮೆರವಣಿಗೆಗೆ ನಿರ್ಮಲಾನಂದಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮಂಗಳಾನಂದನಾಥಸ್ವಾಮಿಜಿ, ಚಂದ್ರಶೇಖರಸ್ವಾಮೀಜಿಗಳು, ನಂಜಾವಧೂತ ಸ್ವಾಮಿಜಿಗಳು ಚಾಲನೆ ನೀಡಲಾಗುವುದು.ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ನಗರದ ಪ್ರವಾಸಿ ಮಂದಿರ ಬಳಿ ೧೦-೩೦ ರಿಂದ ಪಲ್ಲಕ್ಕಿಗಳ ಮರವಣಿಗೆ ಪ್ರಾರಂಭವಾಗಿ ೩ ಗಂಟೆಯವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿವೆ. ನಂತರ ಜಿಲ್ಲಾಡಳಿತದ ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡರ ಜಯಂತಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಹ ಸಮುದಾಯದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಸಮುದಾಯದ ಎಲ್ಲಾ ಮುಖಂಡರು, ಕೆಂಪೇಗೌಡರ ಅಭಿಮಾನಿಗಳು, ಸಮುದಾಯದ ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿಸಪ್ಪಗೌಡ, ಕಾರ್ಯದರ್ಶಿ ಪವನ್ ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ಮಾಗೇರಿ ನಾರಾಯಣಸ್ವಾಮಿ, ಬಿ.ಆರ್.ಲಕ್ಷ್ಮಣ್, ವೀರವೆಂಕಟಪ್ಪ, ಡಿ ಕೃಷ್ಣಪ್ಪ, ಕೆ.ಎಸ್.ಆರ್.ಟಿ.ಸಿ ಯಲವಾರ ರಮೇಶ್, ಶ್ರೀನಿವಾಸ್, ಗೋಪಾಲಗೌಡ, ಮುತ್ತು, ಯಲವಾರ ಪ್ರಕಾಶ್, ಬಾಬು, ವೇಣು, ನಾಗಶೇಖರ್, ಕೆಂಬೋಡಿ ರವಿ, ಶ್ರೀನಿವಾಸ್, ಗೂಳಿಗಾನಹಳ್ಳಿ ನಾಗರಾಜ್, ರೋಟರಿ ರಾಮಚಂದ್ರಪ್ಪ, ಕೆಂಬೋಡಿ ಕೆ.ಎಂ.ದೇವೇಗೌಡ, ಬಿ.ಎಸ್.ವೆಂಕಟೇಶಪ್ಪ, ಚಿಕ್ಕಹಸಾಳ ರವಿಕುಮಾರ್, ಮುತ್ತುರಾಜ್, ಯಲವಾರ ಸತೀಶ್, ಎಲ್.ಇ.ಕೃಷ್ಣೇಗೌಡ, ಶ್ರೀನಿವಾಸಗೌಡ, ಇ.ಸುಬ್ರಮಣಿ ಇದ್ದರು. ಇನ್ನಿತರರು ಉಪಸ್ಥಿತರಿದ್ದರು..