ಜೂ.23ರಿಂದ 27ರವರೆಗೆತಾಳಿಕೋಟೆ ಗ್ರಾಮದೇವತೆ ಜಾತ್ರಾ ಮಹೋತ್ಸವ

ತಾಳಿಕೋಟೆ:ಜೂ.19: ಸುಕ್ಷೇತ್ರ ತಾಳಿಕೋಟೆ ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೋಮ್ಮೆ ಜರುಗುತ್ತಾ ಬಂದಿರುವ ಶ್ರೀ ಗ್ರಾಮದೇವತಾ ಜಾತ್ರಾ ಮಹೋತ್ಸವವು ಇದೇ ದಿ.ಜೂನ 23 ರಿಂದ 27 ರವರೆಗೆ 5 ದಿನಗಳ ಕಾಲ ವಿಜೃಂಬಣೆಯಿಂದ ಜರುಗಲಿದೆ.

ದಿ.23ರಂದು ಮುಂಜಾನೆ 8-00 ಗಂಟೆಗೆ ಪಟ್ಟಣದ ಶ್ರೀ ಬಜಾರ ಅಂಬಾಭವಾನಿ ಮಂದಿರದಿಂದ ಶ್ರೀ ಗ್ರಾಮದೇವಿಯನ್ನು ರಥದಲ್ಲಿ ಕೂಡ್ರಿಸಿ ಭವ್ಯ ಮೆರವಣಿಗೆಯೊಂದಿಗೆ ರಥೋತ್ಸವ ಪ್ರಾರಂಭಗೊಂಡು ಸಾಯಂಕಾಲ ರಾಜವಾಡೆಯಲ್ಲಿರುವ ಶ್ರೀ ದೇವಿಯ ಪಾದಗಟ್ಟೆಗೆ ತಲುಪುವದು. ಈ ಮೇರವಣಿಗೆಯಲ್ಲಿ ಶ್ರೀ ದೇವಿ ಕೋಲಾಟ ಸಂಘದಿಂದ ಕೋಲಾಟ, ಡೊಳ್ಳಿನ ವಾದ್ಯದ ಕುಣಿತ, ಹೆಣ್ಣುಮಕ್ಕಳ ಡೊಳ್ಳಿನ ಮೇಳ, ಚಿಲಿಪಿಲಿ ಗೊಂಬೆ, ಕರಡಿ ಮಜಲು, ಶನೇಶ್ವರಿ ಸಿಂಗಾರಿ ಚಂಡಿ ಮೇಳ, ಪಾಲ್ಗೊಳ್ಳಲಿವೆ. ಈ ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸುವರು.

ಅಂದೇ ರಾತ್ರಿ 10-30ಗಂಟೆಗೆ ಬಸ್ತಿಹಾಳದ ಶ್ರೀ ದೇವಿ ಬಯಲಾಟ ನಾಟ್ಯ ಸಂಘದವರಿಂದ ಶ್ರೀ ದೇವಿಯ ಮಹಾತ್ಮೆ ಅರ್ಥಾರ್ತ ಶುಂಭ-ನಿಶೂಂಬರ ಮರ್ದನ ಎಂಬ ಬಯಲಾಟ ಜರುಗುವದು.

ದಿ.24 ರಂದು ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗೀಗಿ ಪದಗಳು ಮಧ್ಯಾಹ್ನ 4 ಗಂಟೆಯಿಂದ ಶಹಾಪೂರದ ಏಕದಂಡಗಿಮಠದ ಶ್ರೀ ಮಹಾನಾಗುಂದಿ ಸಂಸ್ಥಾನ ಸರಸ್ವತಿ ಪೀಠ ವಿಶ್ವಕರ್ಮ ಪೂಜ್ಯ ಶ್ರೀಶ್ರೀಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳಿಂದ ಹಾಸ್ಯದೊಂದಿಗೆ ನೀತಿ ಪ್ರವಚನ ಕನಸಿನ ಭೂತ, ದೇವಿ ಪುರಾಣ ಜರುಗುವದು. ಸಂಜೆ 6 ಗಂಟೆಗೆ ಖ್ಯಾತ ಹಾಸ್ಯ ಕಲಾವಿದ ಗುರುರಾಜ ಹೊಸಕೋಟೆ ಅವರಿಂದ ಜಾನಪದ ಹಾಗೂ ರಸಮಂಜರಿ ಜರುಗುವದಲ್ಲದೇ ರಾತ್ರಿ 10-30ಗಂಟೆಗೆ ಬ.ಬಾಗೇವಾಡಿಯ ಶ್ರೀ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘದವರಿಂದ ಜಮೀನ್ದಾರ ಸೊಸೆ ಎಂಬ ಸಾಮಾಜಿಕ ನಾಟಕ ಜರುಗುವದು.

ದಿ. 25 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗೀಗಿ ಪದಗಳು, ಮಧ್ಯಾಹ್ನ 3 ಗಂಟೆಗೆ ತುಳಸಗೇರಿಯ ಸರಕಾರಿ ಪ್ರೌಢ ಶಾಲೆ ಹಾಗೂ ಕುವೇಂಪು ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ಜರುಗುವದು. ಸಂಜೆ 6ಗಂಟೆಯಿಂದ ವಿಜಯಪುರದ ಸ್ಟಾಟ್ ಲೈಟ್ ಕಲಾತಂಡದ ವೀರೇಶ ವಾಲಿ ಇವರಿಂದ ಸಂಗೀತ ಮತ್ತು ಕಲರ್ಸ್ ಕನ್ನಡ ವಾಹಿನಿಯ ಮಜಾಭಾರತ ಹಾಗೂ ಗಿಚ್ಚ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ(ರಾಗಿಣಿ) ಹಾಗೂ ಚಿಲ್ಲರ ಮಂಜು ಇವರಿಂದ ಹಾಸ್ಯ ಹಾಗೂ ಜ್ಯು. ವಿಷ್ಣುವರ್ಧನ ರವಿ ಕೋರಿ ಇವರಿಂದ ವಿಶೇಷ ಮನರಂಜನೆ ಕಾರ್ಯಕ್ರಮ ಜರುಗುವವು. ರಾತ್ರಿ 10-30 ಗಂಟೆಗೆ ಬಂಡಿಗಣಿಯ ಶ್ರೀ ಬಸವೇಶ್ವರ ನಾಟ್ಯ ಸಂಘದವರಿಂದ ಗ್ರಾಮ ಪಂಚಾಯತಿ ಗಂಗವ್ವ ಅರ್ಥಾರ್ತ ಸತ್ಯನ ಹೆಂಡತಿ ಶಿಲವಂತಿ ಎಂಬ ಸಾಮಾಜಿಕ ನಾಟಕ ಜರುಗುವದು.

ದಿ.26 ಬೆಳಿಗ್ಗೆ 9ಗಂಟೆಯಿಂದ 2 ಗಂಟೆಯವರೆಗೆ ಗೀಗೀಪದಗಳು, ಮಧ್ಯಾಹ್ನ 3 ಗಂಟೆಗೆ ಭಾರ ಎತ್ತುವ ಸ್ಪರ್ದೆ ನಡೆಯುವದು. ಜೋಳದ ಚೀಲ ಎತ್ತುವ ಸ್ಪರ್ದೆಯಲ್ಲಿ ಪ್ರಥಮ ಭಹುಮಾನ 21 ತೋಲೆ ಬೆಳ್ಳಿ ಕಡೆ, ದ್ವಿತೀಯ ಭಹುಮಾನ 11 ತೋಲೆ ಬೆಳ್ಳಿ ಕಡೆ, ಗುಂಡು ಎತ್ತುವ ಸ್ಪರ್ದೆ ಪ್ರಥಮ ಭಹುಮಾನ 11 ತೋಲೆ ಬೆಳ್ಳಿ ಕಡೆ, ದ್ವಿತೀಯ ಭಹುಮಾನ 8 ತೋಲೆ ಬೆಳ್ಳಿ ಕಡೆ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೆ ಪ್ರಥಮ ಭಹುಮಾನ 11 ತೋಲೆ ಬೆಳ್ಳಿ ಕಡೆ, ದ್ವಿತೀಯ ಭಹುಮಾನ 8 ತೋಲೆ ಬೆಳ್ಳಿ ಕಡೆ,ಯನ್ನು ವಿವಿಧ ಧಾನಿಗಳ ಸಹಕಾರದೊಂದಿಗೆ ನೀಡಲಾಗುವದು. ಸಾಯಂಕಾಲ 7ಗಂಟೆಗೆ ನಾಯನೇಗಲಿಯ ಶ್ರೀ ಭೀರಲಿಂಗೇಶ್ವರ ಡೋಳ್ಳಿನ ಕಲಾ ಗಾಯನ ಸಂಘದವರಿಂದ ಹಾಗೂ ಶ್ರೀ ಶ್ರೀ ರೇವಣಸಿದ್ದೇಶ್ವರ ಕಲಾ ಗಾಯನ ಸಂಘ ಹಿರೂರ ಅವರಿಂದ ಕಲಾ ಗಾಯನ ಜರುಗುವದು. ರಾತ್ರಿ 10-30 ಗಂಟೆಗೆ ಬಂಡಿಗಣಿಯ ಶ್ರೀ ಬಸವೇಶ್ವರ ನಾಟ್ಯ ಸಂಘದವರಿಂದ ಸಂತ ಶಿಶುನಾಳ ಶರೀಫ ಅರ್ಥಾರ್ತ ಗುರು ಶಿಷ್ಯರ ಮಹಿಮೆ ಎಂಬ ಸಾಮಾಜಿಕ ನಾಟಕ ಜರುಗುವದು.

ದಿ. 27 ರಂದು ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗೀಗಿ ಪದಗಳು ಜರುಗುವದು. ಮಧ್ಯಾಹ್ನ 3 ಗಂಟೆಗೆ ರಾಜವಾಡೆಯ ಶ್ರೀ ಗ್ರಾಮದೇವಿಯ ಪಾದಗಟ್ಟೆಯಿಂದ ಶ್ರೀ ಗ್ರಾಮದೇವಿಯ ಮಹಾಮೂರ್ತಿಯ ಭವ್ಯ ಮೆರವಣಿಗೆಯು ವಿವಿಧ ವಾಧ್ಯ ವೈಭವಗಳೊಂದಿಗೆ ಶ್ರೀ ದೇವಿಯ ಮಂದಿರ ಪ್ರವೇಶಿಸುವಳು. ಅಂದೇ ರಾತ್ರಿ 10-30 ಗಂಟೆಗೆ ಇಂಗಳೇಶ್ವರದ ಸಿಕಂದರಬಾಶ್ಯಾ ಬಯಲಾಟ ಸಂಘದವರಿಂದ ಶ್ರೀ ರೇಣುಕಾ ಯಲ್ಲಮ್ಮ ಮಹಾತ್ಮೆ ಎಂಬ ಬಯಲಾಟ ಜರುಗುವದು. ಈ 5 ದಿನಗಳ ಕಾಲ ಜರುಗಲಿರುವ ಜಾತ್ರಾ ಉತ್ಸವದಲ್ಲಿ ಭಕ್ತಾಧಿಗಳಿಗೆ ಪ್ರತಿದಿನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಮತ್ತು ಸಕಲ ಸದ್ಭಕ್ತ ಮಂಡಳಿ ಪ್ರಕಟನೆ ಮೂಲಕ ತಿಳಿಸಿದೆ.