ಜೂ. 19 ಸಾಲ ಮರು ಪಾವತಿಸದಂತೆ ಜಾಗೃತಿ ಅಭಿಯಾನ

ಬಂಗಾರಪೇಟೆ, ಜೂ.೧೬- ಸ್ತ್ರೀ ಶಕ್ತಿ ಸಂಘಗಳು ಸಹಕಾರ ಸಂಘಗಳ ಸಾಲ ಮರುಪಾವತಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜೂ.೧೯ ರಿಂದ ಕರಪತ್ರದ ಮುಖಾಂತರ ಜಾಗೃತಿ ಅಭಿಯಾನ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಹೊರವಲಯದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ಮಹಿಳಾ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾದ್ಯಕ್ಷೆ ಎ,ನಳಿನಿಗೌಡ ರಾಜ್ಯ ವಿದಾನಸಭಾ ಚುನಾವಣಾ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ಹಾಗೂ ಪ್ರಜಾಯಾತ್ರೆ ಸಮಾವೇಶಗಳಲ್ಲಿ ರಾಜ್ಯಾಂದ್ಯಂತ ಎಲ್ಲಾ ಸ್ತ್ರೀ ಶಕ್ತಿ ಸಾಲ ಪಡೆದಿರುವ ಸಹಕಾರ ಸಂಘಗಳ ಸಂಪೂರ್ಣ ಸಾಲವನ್ನು ಅಧಿಕಾರಕ್ಕೆ ಬಂದ ಕೂಡಲೇ ಮನ್ನಾ ಮಾಡುತ್ತೇವೆಂದು ಕೊಡುವ ಮಾತು ತಪ್ಪದ ಸಿದ್ದರಾಮಯ್ಯನವರು ತಾವು ಕೊಟ್ಟಾಂತ ಮಾತನ್ನು ಉಳಿಸಿಕೊಳ್ಳಲು ಸಾಲ ಮನ್ನಾ ಮಾಡಲೇಬೇಕೆಂದು ಸಭೆಯಲ್ಲಿ ಒತ್ತಾಯ ಮಾಡಿದರು.
ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗಳು ತಯಾರಿದ್ದರೂ ಜಿಲ್ಲೆಯ ಕೆಲವು ಸ್ವಯಂಘೋಷಿತ ಕಾಂಗ್ರೇಸ್ ನಾಯಕರು ಅಡ್ಡಗಾಲು ಹಾಕುತ್ತಿರುವುದು ದುರಾದೃಷ್ಠಕರ ನಾವೇನೂ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿ ಎಂದು ಕೇಳುತ್ತಿಲ್ಲ ಕನಿಷ್ಟ ೫೦ ಸಾವಿರ ರೂ ಮಾತ್ರ ಕೇಳುತ್ತಿರುವುದು.ನಾವು ಕಾಂಗ್ರೆಸ್ ನಾಯಕರ ಆಸ್ತಿಯನ್ನೇನೂ ಕೇಳುತ್ತಿಲ್ಲ ಅದರೆ ಕೆಲವು ಕಿಡಿಗೇಡಿಗಳು ಸಾಲ ಮನ್ನಾ ಮಾಡುವುದಕ್ಕೆ ಅಡ್ಡ ಗಾಲು ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ಪಡೆದಿರುವ ಮಹಿಳೆ ಶೈಲಜ ಮಾತನಾಡಿ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳಿಂದ ಸ್ತ್ರೀ ಶಕ್ತಿ ಸಂಘಗಳು ಪಡೆದಿರುವ ಸಾಲ ಮರುಪಾವತಿಸದಂತೆ ಕರಪತ್ರದ ಮುಖಾಂತರ ಜಾಗೃತಿ ಅಭಿಯಾನ ಮೂಡಿಸುವ ಮೂಲಕ ಸಾಲ ಕೇಳಲು ಬಂದರೆ ಪ್ರತಿಯೊಬ್ಬ ಮಹಿಳೆಯೂ ಸಿದ್ದರಾಮಯ್ಯರವರ ಪೋಟೊ ಹಿಡಿದು ನಾವು ಮುಖ್ಯಮಂತ್ರಿಗಳಿಗೆ ಸಾಲವನ್ನು ಕಟ್ಟಿದ್ದೇವೆ ಅಲ್ಲಿಯೇ ವಸೂಲಿ ಮಾಡಿಕೊಳ್ಳಿ ಎಂದು ಹೇಳುವ ಮುಖಾಂತರ ಮಹಿಳೆಯರ ತಾಕತ್ತು ಅಧಿಕಾರಿಗಳಿಗೆ ತೋರಿಸಬೇಕೆಂದು ದೈರ್ಯ ತುಂಬಿದರು.
ಸಿದ್ದರಾಮಯ್ಯ ಎಂದರ ಬಡವರ ರಾಮಯ್ಯ ಅನ್ನರಾಮಯ್ಯ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ರಾಮಯ್ಯ ಎಂದು ಹೆಸರು ಪಡೆದಿರುವ ರವರು ವೇಮಗಲ್ ಮಹಿಳಾ ಸಮಾವೇಶದಲ್ಲಿ ಮಾತು ಕೊಟ್ಟಿದ್ದಾರೆ ಮಾತು ತಪ್ಪದ ರವರು ಸಾಲ ಮನ್ನಾ ಮಾಡುತ್ತಾರೆ ಸಹಕಾರ ಸಂಘಗಳ ಅಧಿಕಾರಿಗಳು ವ್ಯರ್ಥವಾಗಿ ಮನೆಭಾಗಿಲಿಗೆ ಬಂದು ಬಲವಂತದ ಸಾಲ ವಸೂಲಾತಿಗೆ ಮುಂದಾಗಬಾರದು ಒಂದು ವೇಳೆ ಪದೇ ಪದೇ ಸಾಲ ಮರುಪಾವತಿಸುವಂತೆ ಒತ್ತಡ ಹಾಕಿದರೆ ನಾವು ಸಹ ಕಾನೂನನ್ನು ಕೈಗೆ ಎತ್ತಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಎಚ್ಚೆರಿಕೆ ನೀಡಿದರು.
ಜೂ.೧೯ ರ ಸೋಮವಾರದಿಂದ ಕರಪತ್ರದ ಮುಖಾಂತರ ಹಳ್ಳಿ ಹಳ್ಳಿಯಲ್ಲಿ ಸಹಕಾರ ಸಂಘಗಳ ಸಾಲ ಮರುಪಾವತಿಸದಂತೆ ಅಭಿಯಾನ ಅರಂಭಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಲಕ್ಷಂತಾರ ಮಹಿಳೆಯರೊಂದಿಗೆ ಮುಖ್ಯಮಂತ್ರಿಗೆ ಮನೆ ಮುತ್ತಿಗೆ ಹಾಕಿ ಸಾಲ ಮನ್ನಾ ಮಾಡಿಸುವ ನಿರ್ದಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಢ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲ್ಲೂಕಾದ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಸುರೇಶ್‌ಬಾಬು, ಕೋಟೆ ಶ್ರೀನಿವಾಸ್, ಮಂಜುಳಾ ಮುನಿಕೃಷ್ಣ, ರಾಧ, ಚೌಡಮ್ಮ, ಮುನಿಯಮ್ಮ, ರತ್ನಮ್ಮ, ಶಾಂತಮ್ಮ, ಶೋಭ, ಶೈಲಾ ಮುಂತಾದವರಿದ್ದರು.