ಮುಳಬಾಗಿಲು,ಜೂ.೧೨:ವಿದ್ಯುತ್ ಬಳಿಕೆಯ ದರ ಏಕಾಏಕಿ ಏರಿಕೆ ಮಾಡುವ ಮುಖಾಂತರ ಜನಸಾಮಾನ್ಯ ಬದುಕಿನ ಮೇಲೆ ಬರೆ ಎಳೆದಿರುವ ಸರ್ಕಾರದ ವಿರುದ್ದ ಜೂ.೧೪ ರ ಬುಧವಾರ ಬೆಸ್ಕಾಂ ಕಚೇರಿಯ ಮುಂದೆ ಬಾರ್‌ಕೋಲ್ ಚಳುವಳಿ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು
ತಾಲ್ಲೂಕಿನ ಪದ್ಮಘಟ್ಟ ಗ್ರಾಮದ ಧರ್ಮರವರ ತೋಟದಲ್ಲಿ ಕರೆದಿದ್ದ ಸಭೆಯಲ್ಲಿ ರೈತ ಸಂಘದ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು ಬದುಕು ಕಟ್ಟಿಕೊಳ್ಳವ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮುಖಾಂತರ ಉಚಿತ ಭಾಗ್ಯದ ನೆಪದಲ್ಲಿ ಹಗಲುದರೋಡೆ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರುಈ ಹಿಂದೆ ಗ್ರಾಮೀಣ ಭಾಗದ ಬಳಕೆದಾರರು ನಗರದ ಬಳಕೆದಾರರನ್ನು ಪ್ರತ್ಯೆಕ ಪ್ರವರ್ಗದಡಿಯಲ್ಲಿ ಪರಿಗಣಿಸಿ ದರಗಳನ್ನು ನಿಗದಿಪಡಿಸಲಾಗಿತ್ತು, ಅದರಲ್ಲಿ ಗ್ರಾಮೀಣ ಬಳಕೆದಾರರಿಗೆ ನಗರ ಬಳಕೆದಾರರಿಗಿಂತ ಕಡಿಮೆ ದರ ನಿಗದಿಪಡಿಸಲಾಗಿತ್ತು, ಆದರೆ ಈಗ ದರ ರಚನೆಯನ್ನು ಸರಳ ಮತ್ತು ತರ್ಕಬದ್ದಗೊಳಿಸುವ ನೆಪಹೊಡ್ಡಿ ಒಂದೇಪ್ರವರ್ಗದಡಿಯಲ್ಲಿ ಸೇರಿಸಿ ಗ್ರಾಮೀಣ ಭಾಗದ ಜನರ ಮೇಲೆ ಬೆಲೆ ಏರಿಕೆ ಮಾಡುವ ಮೂಲಕ ಬಳಕೆದಾರರಿಗೆ ಸರ್ಕಾರ ಮಂಕುಬೂದಿ ಎರಸುತ್ತಿದೆ ಎಂದು ಆರೋಪ ಮಾಡಿದರು.ತಾಲ್ಲೂಕು ಅದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಚುನಾವಣೆಯಲ್ಲಿ ಮತಬಾಂಧವರಿಗೆ ಮಂಕುಬೂದಿ ಎರಚಿ ರಾಜ್ಯದ ಅರ್ಥಿಕತೆಯನ್ನು ಹಾಳು ಮಾಡುವ ಉಚಿತ ಗ್ಯಾರಂಟಿಗಳನ್ನು ನೀಡುವ ಮುಖಾಂತರ ಪ್ರಜಾಪ್ರಭುತ್ವಕ್ಕೆ ದಕ್ಕೆ ಹಾಗೂ ಸಂವಿಧಾನಕ್ಕೆ ವಿರೋದವಾದ ಗ್ಯಾರಂಟಿಗಳನ್ನು ಜಾರಿಗೆ ತಂದು ಉಚಿತ ವಿದ್ಯುತ್ ಎಂದು ಹೇಳಿ ಈಗ ಏಕಾಏಕಿ ಏಪ್ರಿಲ್ ೧ ರಿಂದಲೇ ವಿದ್ಯುತ್ ದರ ಜಾರಿಗೆ ಬಂದಿದೆ ಎಂದು ಜನಸಾಮಾನ್ಯರನ್ನು ವಂಚಿಸುತ್ತಿರುವ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಪ್ರಕೃತಿ ವಿಕೋಪ , ಬೀಕರ ರೋಗಗಳಿಂದ ತತ್ತರಿಸಿರುವ ರೈತರು, ಉಚಿತ ಭಾಗ್ಯಗಳಿಂದ ಜನರನ್ನು ಸೋಮಾರಿಗಳನ್ನಾಗಿ ಮಾಡಿ ಕೃಷಿ ಕ್ಷೇತ್ರಕ್ಕೆ ಮಾರಕ ಆಗುವಂತಹ ಕಾಯಿದೆಗಳ ಮದ್ಯದಲ್ಲೂ ರಾಜ್ಯದ ಜನರ ನೀರೀಕ್ಷೆಯಂತೆ ಆರೋಗ್ಯ, ಶಿಕ್ಷಣ, ಉಚಿತವಾಗಿ ಕೊಡದೆ ಏಕಾಏಕಿ ವಿದ್ಯುತ್ ದರ ಹೆಚ್ಚಳ ಮಾಡಿರುವುದು ದುರದೃಷ್ಟಕರಬಡವರು ರೈತರು ಕಾರ್ಮಿಕರು ಬದಕನ್ನು ಹಸನು ಮಾಡಬೆಕಾದ ಸರ್ಕಾರ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿರುವದನ್ನು ಖಂಡಿಸಿ ಜೂ.೧೪ ರ ಬುಧವಾರ ಕೋಲಾರ ಬೆಸ್ಕಾಂ ಇಲಾಖೆಯ ಮುಂದೆ ನಷ್ಟ ಬೆಳೆ ಸಮೇತ ಬಾರ್‌ಕೋಲ್ ಚಳುವಳಿ ಮಾಡಿ ಸರ್ಕಾರಕ್ಕೆ ಬುದ್ದಿ ಕಲಿಸುವ ತಿರ್ಮಾನವನ್ನು ಸಭೆಯಲ್ಲಿ ಕೈಗೊಂಡರು
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಹೆಬ್ಬಣಿ ಆನಂದರೆಡ್ಡಿ, ಆವನಿ ಬಾಬಣ್ಣ, ಪಧ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಸುಪ್ರೀಂಚಲ, ರಂಜಿತ್, ಆಂಬ್ಲಿಕಲ್ ಮಂಜುನಾಥ್, ರಾಮಕೃಷ್ಣಪ್ಪ, ಚನ್ನಕೇಶವ, ಸುರೇಶ್‌ಬಾಬು, ವೆಂಕಟೇಶಪ್ಪ, ಪಾರುಕ್‌ಪಾಷ, ಬಂಗಾರಿ ಮಂಜು, ವಿಜಯ್‌ಪಾಲ್, ಸುನಿಲ್, ಭಾಸ್ಕರ್, ರಾಜೇಶ್, ಮುಂತಾದವರಿದ್ದರು,