ಜೂ. 12 ರಿಂದ 14ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಜೂ.11:ಫರಹತಾಬಾದ್‍ದಿಂದ ಸರಡಗಿಯ ಭೀಮಾ ನೀರು ಸರಬರಾಜು ಮೂಲ ಸ್ಥಾವರಕ್ಕೆ ಸರಬರಾಜಾಗುವ 11 ಕೆ.ವಿ ವಿದ್ಯುತ್ ಮಾರ್ಗದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇದರ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ಇದರ ಪ್ರಯುಕ್ತ ಸರಡಗಿಯ ಮೂಲ ಸ್ಥಾವರದಲ್ಲಿ ನೀರು ಸರಬರಾಜಾಗುವ ಪಂಪ್‍ಸೆಟ್‍ಗಳು ನಿಲುಗಡೆಯಾಗಿದ್ದು, ಆದ್ದರಿಂದ ಕಲಬುರಗಿ ನಗರಕ್ಕೆ ಇದೇ ಜೂನ್ 12, 13 ಹಾಗೂ 14 ರಂದು ಮೂರು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕಲಬುರಗಿ ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೀರು ಸರಬರಾಜು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.