ಜೂ. 11 ರಂದು ಜಡೆ ಶಂಕರ ದಾಸಿಮಯ್ಯ ಜಯಂತೋತ್ಸವ ಆಯೋಜನೆ  


ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.09: ನಗರದಲ್ಲಿ ಬಣಗಾರ ಸಿಂಪಿ ಸಮಾಜದಿಂದ ಜೂ. 11 ರಂದು ಜಡೆ ಶಂಕರಲಿಂಗ ಜಯಂತೋತ್ಸವ ಆಯೋಜನೆ ಮಾಡಿದ್ದರು ಸರ್ವರೂ ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿದರು. ಸಂಘದ ಅಧ್ಯಕ್ಷ ವಿರೇಶಪ್ಪ ನಾಗಲೀಕರ ಮಾತನಾಡಿ ಪ್ರತಿ ವರ್ಷ ದಂತೆ ಈ ವರ್ಷವೂ ಜೂನ್ 11 ರಂದು ಬೆಳಿಗ್ಗೆ ಜಡೆಶಂಕರಲಿಂಗ ದೇವರಿಗೆ ರುದ್ರಾಭಿಷೇಕ, ಸಾಮಾನ್ಯ ಸಭೆ ನಂತರ ಎಸ್.ಎಸ್.ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಂಡದ್ದು ಕಾರ್ಯಕ್ರಮ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು. ಜಡೆಶಂಕರ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರು ನಾಗರಾಜ ನಾಗಲೀಕರ, ಬಣಗಾರ ಸಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ  ಹರೀಶ ಮೂರಶಿಳ್ಳಿ, ವಿ.ಬಿ ಮಲ್ಲಿಕಾರ್ಜುನ, ಗುರುಸಿದ್ದಪ್ಪ, ಪ್ರವೀಣ್ ಚಳಮರದ, ಸಂಜಿವ್ ಕುಮಾರ ಗೋಕಾವಿ ಇದ್ದರು.