ಜೂ. 11 ರಂದು ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನ ಚಾಲಕರಿಗೆ ಕೋವಿಡ್ ಲಸಿಕೆ

ಕಲಬುರಗಿ,ಜೂ.9:ಇನ್ನು ಬಹಳಷ್ಟು ಜನರು ಕೋವಿಡ್ ಲಸಿಕೆಯನ್ನು ಪಡೆಯದೇ ಇರುವ ಹಿನ್ನೆಲೆಯಲ್ಲಿ 18 ರಿಂದ 44 ವಯೋಮಾನದ ಕಲಬುರಗಿ ನಗರದ ಎಲ್ಲಾ ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ವಾಹನ ಚಾಲಕರಿಗೆ ಮತ್ತೊಮ್ಮೆ ಇದೇ ಜೂನ್ 11 ರಂದು ಕಲಬುರಗಿಯ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿ (ಹಳೆ ಆರ್.ಟಿ.ಓ. ಕಚೇರಿ) ಯಲ್ಲಿ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಸರ್ಕಾರಿ ವಾಹನಗಳ ವಾಹನ ಚಾಲಕರನ್ನು ರಾಜ್ಯ ಕೊರೋನಾ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾಗಿದ್ದು, ಕಲಬುರಗಿ ನಗರದ ಎಲ್ಲಾ ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ ಹಾಗೂ ಸರ್ಕಾರಿ ವಾಹನಗಳ ವಾಹನ ಚಾಲಕರು ಮೇಲ್ಕಂಡ ದಿನದಂದು ಕಲಬುರಗಿಯ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿ (ಹಳೆ ಆರ್‍ಟಿಓ ಕಚೇರಿ)ಗೆ ಡಿಎಲ್, ಆಧಾರ್ ಕಾರ್ಡ್ ಮತ್ತು ನಮೂನೆ-3ನ್ನು ದಾಖಲೆಗಳೊಂದಿಗೆ ಹಾಜರಾಗಿ ಕೋವಿಡ್ ಮೊದಲನೇ ಡೋಸ್ ಲಸಿಕೆಯನ್ನು ಪಡೆಯಬೇಕು.

ಈ ಹಿಂದೆ ಜೂನ್ 3 ಹಾಗೂ 4 ರಂದು ಎರಡು ದಿನ ಕಾಲ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತೆಂದು ಅವರು ತಿಳಿಸಿದ್ದಾರೆ.