ಜೂ.1 ರಿಂದ ಯುಪಿ 55 ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆ

ಲಕ್ನೋ,ಮೇ.30- ಉತ್ತರ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕು ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 1 ರಿಂದ ರಾಜ್ಯದ 55 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮ ಸರಳೀಕರ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.

ಉತ್ತರ ಪ್ರದೇಶದಲ್ಲಿ ನಿತ್ಯ 600ಕ್ಕಿಂತ ಕಡಿಮೆ ಸೋಂಕು ಸಂಖ್ಯೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂತಹದೊಂದು ನಿರ್ಧಾರ ಪ್ರಕಟಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಿಸಿದ್ದ ವಾರಾಂತ್ಯ ಲಾಕ್ ಡೌನ್ ಕೂಡ ತೆರವು ಮಾಡಲಾಗಿದೆ, 66 ಜಿಲ್ಲೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರತನಕ ಮಾರುಕಟ್ಟೆ ಆರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿಯ ಕುರಿತು ಮುಖ್ಯಕಾರ್ಯದರ್ಶಿ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

20 ಜಿಲ್ಲೆಗಳಲ್ಲಿ ಕಠಿಣ ಕ್ರಮ:

ರಾಜಧಾನಿ ಲಕ್ನೋ ಸೇರಿದಂತೆ ಇನ್ನುಳಿದ 20 ಜಿಲ್ಲೆಗಳಲ್ಲಿ ಸೋಂಕು ಸಂಖ್ಯೆ ಹೆಚ್ಚಿನ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳು ಮುಂದುವರಿಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಲಕ್ನೋ, ಮೀರತ್, ಶಹರಾನ್ ಪುರ್,ವಾರಣಾಸಿ, ಗಾಜಿಯಾಬಾದ್,ಗೋರಖ್‍ಪುರ್,ಬರೇಲಿ, ಗೌತಮ್ ಬುದ್ದ ನಗರ್, ಬುಲಂದರ್ ಶಾ,ಝಾನ್ಸಿ, ಪ್ರಯಾಗ್ ರಾಜ್,, ಲಕೀಂ ನಗರ, ಸೋನ್ ಭದ್ರ ಸೇರಿದಂತೆ 20 ಜಿಲ್ಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.