ಜೂ.೯.ರಾಜ್ಯ ಮಟ್ಟದ ಬಹುಜನರ ಐಕ್ಯತಾ ಸಮಾವೇಶ

ರಾಯಚೂರು,ಜೂ.೭- ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರ ೮೫ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಬಹುಜನ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ನರಸಿಂಹಲು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸಮಾವೇಶವು ಜೂನ್ ೯ ರಂದು ಬೆಳಿಗ್ಗೆ ೧೧-೩೦ ಕ್ಕೆ ಬಳ್ಳಾರಿ ಬಿಡಿಎ ಮೈದಾನ ಪುಟ್ ಬಾಲ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ ಎಂದರು.
ಬಿ.ಕೃಷ್ಣಪ್ಪ ಅವರು ಸಮಾಜವನ್ನು ಪರಿವರ್ತಿಸುವ ಕ್ರಾಂತಿಕಾರ ವಿಚಾರಧಾರೆಯನ್ನು ಹೊಂದಿದ್ದರು,ರಾಷ್ಟ್ರಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡು ಬಿ.ಕೃಷ್ಣನವರು ದಲಿತರ ಉದ್ದಾರ ಅಸೃಶ್ಯತೆ ಸಾಮಾಜಿಕ ತಾರತಮ್ಯಗಳ ನಿರ್ಮೂಲನೆ ಮತ್ತು ಮಲಹೊರತು ಪದ್ಧತಿ ನಿಷೇಧ,ಆರ್ಥಿಕ ಸಮಾನತೆಯಾ ಚಿಂತನೆ ನಡೆಸಿದರು ಎಂದರು.
ಈ ಸಮಾವೇಶಕ್ಕೆ ಪ್ರಗತಿಪರ ಚಿಂತಕರು,ಮಹಿಳಾಪರ ಚಿಂತಕರು,ವಿದ್ಯಾರ್ಥಿ ಪರ ಚಿಂತಕರು,ಸಾಮಾಜಿಕ ಪರ ಚಳುವಳಿಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹನುಮೇಶ,ಅಂಜಿನಯ್ಯ, ಫಕುರುದ್ದಿನ್, ಬಾಬು,ಶೇಖ್ ಜಲಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.