ಜೂ.೯ ರಂದು ಪ್ರತಿಮಾ ಸಭಾದಿಂದ ದಿ.ಡಾ.ಎಂ.ಜಿ ಈಶ್ವರಪ್ಪಗೆ ನುಡಿನಮನ


ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೭; ಪ್ರತಿಮಾ ಸಭಾ ವತಿಯಿಂದ ಜೂ.೯ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಕುವೆಂಪು ಕನ್ನಡಭವನದಲ್ಲಿ  ಸಾಹಿತಿ,ರಂಗಕರ್ಮಿ ಹಾಗೂ ಜನಪದ ತಜ್ಞರಾದ ದಿ.ಡಾ.ಎಂ.ಜಿ ಈಶ್ವರಪ್ಪ ಅವರಿಗೆ ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಮಾ ಸಭಾದ ಖಜಾಂಚಿ  ಬಿ.ಎನ್  ಮಲ್ಲೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಮಾ ಸಭಾದ ಸ್ಥಾಪಕ ಅಧ್ಯಕ್ಷರಾದ‌ ಪ್ರೊ.ಎಸ್.ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ನಟ ಹಾಗೂ ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ್ ಜಿ ಕಪ್ಪಣ್ಣ,ಖ್ಯಾತ ಕಾದಂಬರಿಕಾರರಾದ ಕುಂ.ವೀರಭದ್ರಪ್ಪ,ಪ್ರತಿಮಾ ಸಭಾ ಸಂಸ್ಥಾಪಕ ನಿರ್ದೇಶಕರಾದ ಪ್ರೊ.ಜಿ.ಎನ್ ಸತ್ಯಮೂರ್ತಿ ಅವರುಗಳು ನುಡಿನಮನ ಸಲ್ಲಿಸಲಿದ್ದಾರೆ.ದಿ.ಡಾ.ಎಂ.ಜಿ ಈಶ್ವರಪ್ಪ ಪತ್ನಿ ಪ್ರೊ.ಶ್ರೀಮತಿ ಬಸಮ್ಮ,ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.ಮೊದಲಿಗೆ ಗಾನ ಲಹರಿ ಸಂಗೀತ ವಿದ್ಯಾಲಯದಿಂದ ರಂಗಗೀತೆಗಳು ನಡೆಯಲಿದೆ.ಹಿರಿಯ ಪತ್ರಕರ್ತರಾದ ಬಾ.ಮಾ ಬಸವರಾಜಯ್ಯ ಸ್ವಾಗತ ಕೋರಲಿದ್ದು .ನಗರವಾಣಿ ಪತ್ರಿಕೆ ಸಹ ಸಂಪಾದಕರಾದ ಬಿ.ಎನ್ ಮಲ್ಲೇಶ್ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ.ನಂತರ ದಿ.ಎಂ.ಜಿ ಈಶ್ವರಪ್ಪ ಅವರ ಒಡನಾಡಿಗಳಿಂದ ಪುಷ್ಪನಮನ ಹಾಗೂ ನುಡಿನಮನ ಬಳಿಕ ಅಧ್ಯಕ್ಷರಾದ ಪ್ರೊ.ಎಸ್ ಹಾಲಪ್ಪ ಮಾತನಾಡಲಿದ್ದಾರೆ.ಪತ್ರಕರ್ತೆ ಅನಿತಾ ವಂದನಾರ್ಪಣೆ ಮಾಡಲಿದ್ದಾರೆ.ನಾಗರಾಜ ಸಿರಿಗೆರೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು.ಎಸ್ ಎಸ್ ಸಿದ್ದರಾಜು,ಎನ್ .ಟಿ ಮಂಜುನಾಥ್,ಶಂಭಣ್ಣ,ರವೀಂದ್ರ ಅರಳಗುಪ್ಪಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ‌ ಬಾ.ಮ. ಬಸವರಾಜಯ್ಯ, ಎಸ್. ಎಸ್. ಸಿದ್ದರಾಜು, ಎನ್.ಟಿ. ಮಂಜುನಾಥ್, ಶಂಭಣ್ಣ ಉಪಸ್ಥಿತರಿದ್ದರು.