ದಾವಣಗೆರೆ.ಮೇ.೩೦; ಬಹು ನಿರೀಕ್ಷೆಯ ವಿ.ಮನೋಹರ್ ನಿರ್ದೇಶನದದರ್ಬಾರ್ ಚಲನಚಿತ್ರ ಜೂನ್ ೯ ರಂದು ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ ಎಂದು ನಾಯಕನಟ ಸತೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದರ್ಬಾರ್ ಚಿತ್ರಕ್ಕೆ ಬಿ.ಎನ್ ಶಿಲ್ಪ ನಿರ್ಮಾಪಕರಾಗಿದ್ದಾರೆ.ಚಿತ್ರೀಕರಣ ಮಂಡ್ಯದಲ್ಲಿ ನಡೆದಿದೆ.ಸುಂದರವಾದಹಳ್ಳಿಯೊಂದರಲ್ಲಿ ಜನಗಳು ಜಾತಿ,ಮತ,ಧರ್ಮ, ಯಾವುದೇ ಭೇದವಿಲ್ಲದೆ ಬದುಕುತಿರುತ್ತಾರೆ ಆ ಹಳ್ಳಿಯ ಊರ ಶ್ರೀಮಂತರ ಮಗನೊಬ್ಬ ತನ್ನ ಮೇಲಿರಿಮೆಯ ದರ್ಪ ದರ್ಬಾರು & ನೈತಿಕ ಪೋಲಿಸ್ಗಿರಿಯಿಂದ ಮೇರೆಯುತಿರುತ್ತಾನೆ,ಇದರಿಂದ ಹಳ್ಳಿಯ ಇತರರಿಗೆ ಕಿರಿಕಿರಿ ಉಂಟಾಗುತ್ತದೆ ಆಗ ಹಳ್ಳಿಯ ಒಂದಷ್ಟು ಜನ ಸೇರಿ ಇವನ ದರ್ಪ ಅಹಂ & ಸೋಕ್ಕು ಮುರಿಯಲು ಗ್ರಾಮ ಪಂಚಾಯಿತಿ ಚುನಾವಣೆಗೆ ಅವನನ್ನು ನಿಲ್ಲಿಸಿ ಅವನು ಓಟಿಗಾಗಿ ಪರದಾಡುವಂತೆ ಮಾಡಿ ಮಜಾತಗೆದುಕೋಳ್ಳುತ್ತಾರೆ ,ನಂತರ ಎನಾಗುತ್ತದೆ ಎನ್ನುವುದೇ ಕ್ಲೈಮಾಕ್ಸ್. ಸಂಪೂರ್ಣ ರಾಜಕೀಯ, ವಿಡಂಬನಾತ್ಮಕ ಹಾಸ್ಯ ಚಿತ್ರವಾಗಿದ್ದು ಅತ್ಯುತ್ತಮ ಸಂದೇಶ ಹೊಂದಿರುವ ಮನೋರಂಜನಾತ್ಮಕ ಸಿನಿಮಾ ಇದಾಗಿದೆ ಎಂದರು.ನಿರ್ದೇಶಕ ವಿ.ಮನೋಹರ್ ಮಾತನಾಡಿ ‘ಸುಮಾರು 13 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ, ಓ ಮಲ್ಲಿಗೆ’ ಚಿತ್ರ ನಿರ್ದೇಶನ ಮಾಡಿದಾಗ ಎಲ್ಲರೂ ನನ್ನನ್ನು ಹೀಯಾಳಿಸಿದ್ದರು. ನನ್ನಮೇಲೆ ಸಂಶಯಪಟ್ಟವರಿಗೆ ಈ ಚಿತ್ರವೇ ಉತ್ತರ, ಈಗ ಹಾಸ್ಯ ಅಂದರೆ ಡಬಲ್ ಮೀನಿಂಗ್ ಅನ್ನುವಂತಾಗಿದೆ. ಮೊದಲ ಪ್ರದರ್ಶನಕ್ಕೆ ಬಂದವರು ಮೆಚ್ಚುವ ಎಲ್ಲ ಅಂಶಗಳು ಚಿತ್ರದಲ್ಲಿವೆ. ಗಿಚ್ಚಿಗಿಲಿಗಿಲಿ ಕಾರ್ತೀಕ್ ಬೇರೆ ಥರದ ರೋಲ್ ಮಾಡಿದ್ದಾರೆ. ಸಂತು ಹೀರೋ ಜೊತೆನೇ ಇದ್ದು ಆಗಾಗ ಕಾಲೆಳೆಯುವ ಪಾತ್ರ ಮಾಡಿದ್ದಾರೆ. ಸಾಧು ಕೋಕಿಲ, ನವೀನ್ ಪಡೀಲ್ ಜೋಡಿ ನೋಡುಗರನ್ನು ರಂಜಿಸುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು. ಇನ್ನೂ ನಾಯಕಿಯಾಗಿ ಜಾಹ್ನವಿ ಅಭಿನಯಿಸಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್,ರಾಕೇಶ್ ಇದ್ದರು.