ಜೂ.೩ ಕ್ಕೆ ವಿದೇಶ ವ್ಯಾಸಂಗ ಮಹಾಮೇಳ

ದಾವಣಗೆರೆ.ಮೇ.೨೭: ಕರಿಯರ್ ಗ್ಯಾನ್ ವತಿಯಿಂದ ಜೂನ್ ೩ ರಂದು ವಿದೇಶ ವ್ಯಾಸಂಗ ಮಹಾಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶಿವಕೃಷ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ ಪ್ರಾರಂಭವಾಗಿ ಹತ್ತು ವರ್ಷಗಳಾಗಿದ್ದು, ಇದುವರೆಗೆ ೪ ಸಾವಿರ ವಿದ್ಯಾರ್ಥಿಗಳು ವಿದೇಶ ವ್ಯಾಸಂಗಕ್ಕೆ ತೆರಳಿದ್ದಾರೆ ಎಂದರು.ವಿದೇಶ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಜೂ.೩ ರಂದು ಎಂಸಿಸಿ ಬಿ ಬ್ಲಾಕ್ ನ ಐಎಂಎ ಹಾಲ್ ನಲ್ಲಿ‌ ಬೆಳಗ್ಗೆ ೧೦.೩೦ ರಿಂದ ೫ ರವರೆಗೆ ಮಹಾಮೇಳ ಹಮ್ಮಿಕೊಳ್ಳಲಾಗಿದೆ.ನಮ್ಮ ಸಂಸ್ಥೆಯ ಮುಖಾಂತರ ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗದ ಪ್ರಕ್ರಿಯೆ ಆರಂಭದಿಂದ ಯಾವ ದೇಶ,ಯಾವ ವಿಶ್ವವಿದ್ಯಾಲಯ ಮುಂತಾದ ವಿದ್ಯಾಭ್ಯಾಸದ ಎಲ್ಲಾ ಮಾಹಿತಿ ನೀಡಲಾಗುವುದು ಎಂದರು.ವಿದೇಶ ವ್ಯಾಸಂಗ ಬಯಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಹಾಗೆ ಪೂರ್ಣ ಪ್ರಯತ್ನ ಮಾಡಲಾಗುವುದು.ಇಲ್ಲಿಯವರೆಗೂ ವಿದೇಶ ವ್ಯಾಸಂಗದ ಮಾಹಿತಿಗಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು ಆದರೆ ಈಗ ಈ ಸೌಲಭ್ಯ ದಾವಣಗೆರೆಯಲ್ಲೂ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವು,ವಿನಾಯಕ ಇದ್ದರು.