ದಾವಣಗೆರೆ. ಜೂ.೨೦; ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ ವತಿಯಿಂದ ಜೂ.೨೬ ರಂದು ಹೆಬ್ಬಾಳು ಮಠದಲ್ಲಿ ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ಗೋ ಆಧಾರಿತ ಹಾಗೂ ಸಾವಯವ ಕೃಷಿಯಿಂದ ರೈತರ ಅಭಿವೃದ್ಧಿ ಮತ್ತು ಪಂಚಮಹಾಭೂತಗಳ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಆರ್ ಧನಂಜಯ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಸಿದ್ದಗಿರಿ ಮಠದ ಶ್ರೀ ಅದೃಷ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಹಾಗೂ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಇದೇ ವೇಳೆ ರೈತರೊಂದಿಗೆ ಸಂವಾದ ಸಹ ಜರುಗಲಿದೆ.ಆಗಮಿಸುವ ಪ್ರತಿಯೊಬ್ಬರಿಗೂ ಉಚಿತ ಗೋಕೃಪಾಮೃತ ವಿತರಣೆ ಮಾಡಲಾಗುವುದು ಎಂದರು.ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೂ.೨೫ ರಂದು ಸಂಜೆ ೬ ಕ್ಕೆ ಅಂತರ್ಜಲ ತಜ್ಞರಾದದೇವರಾಜ ರೆಡ್ಡಿಯವರು ಜಲ ಮರುಪೂರಣ ಹಾಗೂ ಮಳೆನೀರು ಕೊಯ್ಲು ವಿಷಯದ ಬಗ್ಗೆ ರೈತರಿಗೆ ತರಬೇತಿ ನೀಡಲಿದ್ದಾರೆ.ಆಸಕ್ತ ರೈತರು ಎರಡು ದಿನ ಮುಂಗಡವಾಗಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9986451541,9945269210 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿ ಮಾಡಬೇಕು ಇದರಿಂದ ರೈತರಿಗೂ ಆರ್ಥಿಕ ಸಹಾಯವಾಗುತ್ತದೆ ಈ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಚಿದಾನಂದಪ್ಪ, ವೆಂಕಟೇಶ್ವರ ರಾವ್ ಜಿ.ಟಿ ಬಸವರಾಜ್, ನೇರ್ಲಿಗೆ ಪ್ರಕಾಶ್ಇದ್ದರು.