ಜೂ.೧೯: ರಿಮ್ಸ್ ನಿರ್ದೇಶಕ,ಆಡಳಿತಾಧಿಕಾರಿಗಳ ಅಮಾನತ್ತಿಗೆ ಧರಣಿ

ರಾಯಚೂರು,ಜೂ.೧೭-
ರಾಯಚೂರು ಜಿಲ್ಲೆಯ ರಿಮ್ಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾಗಿ ರೀತಿಯಲ್ಲಿ ಮೂಲಭೂತ ಮತ್ತು ಒಳರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡದೇ ಕರ್ತವ್ಯ ಲೋಪವೆಸಗಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ರಿಮ್ಸ್ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಜೂನ್ ೧೯ ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಸಾರ್ವಜನಿಕರ ರಿಮ್ಸ್ ಆಸ್ಪತ್ರೆಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲೆಂದೆ ೭೦೦ ಬೆಡ್‌ಗಳ ಆಸ್ಪತ್ರೆ ವ್ಯವಸ್ಥೆ ಮಾಡಿದ್ದು,ಆದರೆ ದುರ್ದೈವ ಈ ಭಾಗದ ಜನರ ಆರೋಗ್ಯ ಸುಧಾರಣೆ ಆಗಲೆಂದು ಮಹಿಳೆಯರಿಗೆ ಹೆರಿಗೆ, ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆ, ಇನ್ನಿತರ ರೋಗಗಳಿಗೆ ಸರಿಯಾದ ಚಿಕಿತ್ಸೆ ಮಾಡುವಲ್ಲಿ ವೈದ್ಯಾಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಕೇವಲ ಕಾಟಚಾರಕ್ಕೆ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಮತ್ತು ಮಾಹಿತಿಗಾಗಿ ತಮ್ಮ ಖಾಸರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ರೋರಿಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಟ್ಟು ೨೨೫ ಸ್ಟಾಫ್ ನರ್ಸ್ ಗಳಿದ್ದು ಅದರಲ್ಲಿ ೭೦ ಜನ ಸ್ಟೈಫಂಡರಿ ಆಧಾರದ ಮೇಲೆ ಮತ್ತು ೨೯ ವಿಧ್ಯಾಭ್ಯಾಸಕ್ಕೆ ೪೦ ಜನ ಸ್ಟಾಫ್ ನರ್ಸ್ ಸೀನಿಯರ್ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು,೧೫ ಜನ ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿಗಾಗಿ ನಿಯೋಜನೆ ಮಾಡಿದ್ದು,ಒಟ್ಟು ೧೫೪ ಸ್ಟಾಫ್ ನರ್ಸ್ ಗಳು ಮಾತ್ರ ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.೭೦೦ ಬೆಡ್ ಆಸ್ಪತ್ರೆಯಲ್ಲಿ ಜಿಲ್ಲೆಯ ೫ ತಾಲುಕಗಳು ಮತ್ತು ನಗರದಿಂದ ಬರುವ ಹೊರ ಮತ್ತು ಒಳ ರೋಗಿಗಳಿಗೆ ಚಿಕತ್ಸೆ ಮತ್ತು ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸರ್ಕಾರದ ನಿಯಮದ ಪ್ರಕಾರ ವೈದ್ಯರು, ಬೆಳಗ್ಗೆ ೧೦.೦೦ ಗಂಟೆಯಿಂದ ಸಾಯಂಕಾಲ ೦೪.೩೦ ವರೆಗೆ ಹೊರ ರೋಗಿ ಚಿಕಿತ್ಸೆಗೆ ಬಂದಂತಹ ರೋಗಗಳಿಗೆ ಚಿಕಿತ್ಸೆಯನ್ನು ನೀಡಬೇಕು.ಹಾಗೂ ವಿವಿಧ ಒಳ ರೋಗಿಗಳಿಗೆ ವಾರ್ಡನಲ್ಲಿ ನುರಿತ ವೈದ್ಯರು, ಸಹಾಯಕ ವೈದ್ಯರು ಆಯಾ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಲು ನಿಯಮವಿದೆ.ಆದರೆ ರಾಯಚೂರು ರಿಮ್ಸ್ ಆಸ್ಪೆತ್ರೆ ವೈದ್ಯರು ಕಾಟಾಚಾರಕ್ಕೆ ಮಾತ್ರ ಬೆಳಗ್ಗೆ ೧೦.೦೦ ಗಂಟೆಗೆ ಬಂದು ಬೆರಳಚ್ಚು ಹಾಜರಿ ಕೊಡುವುದಕ್ಕಾಗಿ ಬಂದು ಕಾಟಚಾರಕ್ಕೆ ಒಂದು ತಾಸು ಮಾತ್ರ ಆಸ್ಪತ್ರೆಯಲ್ಲಿದ್ದು, ತಮ್ಮ ಖಾಸಗಿ ಆಸ್ಪತ್ರೆಗೆ ಮರಳಿ ಪುನಃ ಸಾಯಂಕಾಲ ೦೪-೦೦ ಗಂಟೆಗೆ ರಿಮ್ಸ್ ವೈದ್ಯಕೀಯ ಕಾಲೇಜನಲ್ಲಿ ಬೆರಳಚ್ಚು ಹಾಜರಾತಿ ನೀಡುವ ಮೂಲಕ ಮನೆಗೆ ತೆರಳುತ್ತಿದ್ದಾರೆ ಆದ್ದರಿಂದ ಕೂಡಲೇ ಇವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹನುಮೇಶ ಅರೋಲಿ,ತಿಮ್ಮಪ್ಪ,ಫಕ್ರುದ್ದೀನ್ ಮಹ್ಮದ್ ಅಲಿ,ಎಂ.ಬಾಬು, ಆಂಜನೆಯ್ಯ ಜಲಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.