ಜೂ.೧೭ ರಿಂದ ಸಂಗೀತ ಸಮ್ಮೇಳನ

ರಾಯಚೂರು,ಜೂ.೧೫- ಪಂಡಿತ್ ಪುಟ್ಟರಾಜ ಗವಾಯಿಗಳ ೧೩ನೇಯ ಪುಣ್ಯ ಸ್ಮರಣೆಯ ಅಂಗವಾಗಿ ೨ ದಿನದ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಲಾವಿದರಿಂದ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ಖಜಾಂಚಿ
ಪಿ.ಚಿನ್ನಯ್ಯ ಸ್ವಾಮಿ ಹೇಳಿದರು.
ಅವರಿಂದ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇದೇ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ೯ಗಂಟೆಗೆ ನಗರದ ಸೋಮವಾರಪೇಟೆ ಹಿರೇಮಠನಲ್ಲಿ ಈ ಸಮ್ಮೇಳನ ಆಯೋಜನೆ ಮಾಡಲಾಗಿದ್ದು ಅಂದು ರಾಜಕೀಯ ಗಣ್ಯರು, ಸ್ವಾಮಿಗಳು,ಸಮಾಜ ಸೇವಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಶನಿವಾರ, ೧೭ತಾರೀಖಿನಂದು ಅಭಿನವ ರಾಚೋಟಿವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಚಿವರಾದ ಎನ್.ಎಸ್.ಬೋಸರಾಜು, ಶಾಸಕ ಶಿವರಾಜ್ ಪಾಟೀಲ್, ರಂಗಣ್ಣ ಪಾಟೀಲ್ ಅಳ್ಳುಂಡಿ, ಗಿರಿಜಾಶಂಕರ್ ,ಎನ್.ಶರಣಪ್ಪ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎಂದು ಹೇಳಿದರು. ನಂತರ ಗೌರವಾಧ್ಯಕ್ಷ ರಘುಪತಿ ಪೂಜಾರಿ ದಿನ್ನಿ ಮಾತನಾಡಿ, ಡಾ.ಪಂ.ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು ವಿವಿಧ ಸಾಂಸ್ಕೃತಿಕ ತಂಡಗಳು, ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಬದಲ್ಲಿ ಅಧ್ಯಕ್ಷ ಈರಣ್ಣ ಹೂಗಾರ, ಎಸ್.ಪಿ.ಸಿದ್ಧಯ್ಯ ಸ್ವಾಮಿ, ಎ.ಎಸ್.ರಘುಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.