ದಾವಣಗೆರೆ.ಜೂ.೧೩: ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ವಿನು ಬಳಂಜ ಅವರು ಹಿರಿತೆರೆಯಲ್ಲಿ ತಮ್ಮ ಪ್ರಥಮ ಹೆಜ್ಜೆ ಇಡುತ್ತಿದ್ದು, ಇದೇ ಜೂನ್ 16 ರಂದು ‘ಬೇರ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ನಿರ್ದೇಶಕ ವಿನು ಬಳಂಜ ಮಾತನಾಡಿ ನಾಲ್ಕೈದು ವರ್ಷಗಳಿಂದ ವೈಯಕ್ತಿಕ ಕಾರಣದಿಂದ ನಾನು ನಿರ್ದೇಶನದಿಂದ ದೂರವಿದ್ದು, . ಒಮ್ಮೆ ನಾನು ಕಲ್ಲಡ್ಕದ ಮ್ಯೂಸಿಯಂಗೆ ಹೋಗಿದ್ದಾಗ ಅಲ್ಲಿ ಈ ಚಿತ್ರದ ಕಥೆ ಹುಟ್ಟಿದ್ದು ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿತು ಎಂದರು.ಬೇರ’ ಶೀರ್ಷಿಕೆಯಡಿ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದು, . ಎಸ್ಎಲ್ ವಿ ಕಲರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ , ಶೈನ್ ಶೆಟ್ಟಿ , ದತ್ತಣ್ಣ , ಯಶ್ ಶೆಟ್ಟಿ , ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ ಎಂದರು.ದಿವಾಕರ ದಾಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ . ರಾಮದಾಸ ಶೆಟ್ಟಿ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ ಎಂದರು.ತುಳುವಿನಲ್ಲಿ ‘ಬೇರ’ ಎಂದರೆ ವ್ಯಾಪಾರ ಎಂದರ್ಥ , ಅಮಾಯಕ ಮನುಷ್ಯರನ್ನು ಮೆಟ್ಟಿಲಾಗಿ ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ . ಹಾಗೂ ಯಾವ ತಾಯಂದಿರ ಮಕ್ಕಳೂ ಸಹ ಇನ್ನೊಬ್ಬರಿಂದಾಗಿ ಸಾಯಬಾರದು ಎನ್ನುವುದೇ ಈ ಚಿತ್ರದ ಕಥಾಹಂದರ , ಈ ಚಿತ್ರದಲ್ಲಿ ನಾಯಕ , ನಾಯಕಿ ಅಂತ ಯಾರೂ ಇಲ್ಲ , ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ ಎಂದರು.ನಿರ್ಮಾಪಕ ದಿವಾಕರ್ ದಾಸ್ ಮಾತನಾಡಿ, ಕೇವಲ ಮೂರು ಜನ ಕೆಲಸಗಾರದಿಂದ ಶುರುವಾದ ಎಸ್ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ , ಈಗ ಎಸ್ಎಲ್ ವಿ ಕಲರ್ಸ್ ಲಾಂಛನದಲ್ಲಿ ಬೇರ ಎಂಬ ಚಿತ್ರವನ್ನು ಮೊದಲಬಾರಿಗೆ ನಿರ್ಮಾಣ ಮಾಡಿದ್ದೇವೆ ಎಂದರು .ನಾಯಕಿಯಾಗಿ ಹರ್ಷಿಕಾ ಪೂಣಚ್ಚ , ನಾಯಕರಾಗಿ ಯಶ್ ಶೆಟ್ಟಿ , ಅಶ್ವಿನ್ ಹಾಸನ್ , ಚಿತ್ಕಲ ಬಿರಾದಾರ್ , ಶಾಂತಲ, ಅನ್ನಪೂರ್ಣ , ಮಂಜುನಾಥ್ ಹೆಗಡೆ , ರಾಕೇಶ್ ಮಯ್ಯ , ಧವಳ್ ದೀಪಕ್ ಚಿತ್ರದಲ್ಲಿ ಅಭಿನಯಿಸಿದ್ದಾರೆ . ಬೇರ ಚಿತ್ರಕ್ಕೆ ಛಾಯಾಗ್ರಹಕರಾಗಿ ರಾಜಶೇಖರ್ ಕೆಲಸ ಮಾಡಿದ್ದಾರೆ . ವಿಶೇಷವಾಗಿ ಈ ಚಿತ್ರದಲ್ಲಿ ಹಾಡುಗಳಿಲ್ಲ. ಮಣಿಕಾಂತ್ ಕದ್ರಿ, ಹಿನ್ನೆಲೆ ಸಂಗೀತ ಒದಗಿಸಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ, ನಾಯಕರಾದ ಯಶ್ ಶೆಟ್ಟಿ, ಹರ್ಷವರ್ಧನ್, ಧವಳ್ ದವನ್ ಹಾಗೂ ಪ್ರಭು ಉಪಸ್ಥಿತರಿದ್ದರು.