ಜೂ.೧೨ ಕ್ಕೆ ಡಾ.ಪಂ.ಪುಟ್ಟರಾಜ ಸೇವಾಸಮಿತಿ ಜಿಲ್ಲಾಘಟಕದ ಉದ್ಘಾಟನೆ

ದಾವಣಗೆರೆ.ಜೂ.೧೦; ನಗರದ ಜಯದೇವ ವೃತ್ತದ ಬಳಿಯಿರುವ ಶ್ರೀ ಶಿವಯೋಗಿ ಮಂದಿರಲ್ಲಿ‌ ಜೂ.೧೨ ರಂದು ಸಂಜೆ ೫.೩೦ ಕ್ಕೆಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ, ದಾವಣಗೆರೆ ಜಿಲ್ಲಾ ಘಟಕ, ಮತ್ತು ಮಹಿಳಾ ಘಟಕದ ಉದ್ಘಾಟನೆ ಜೊತೆಗೆ ಗುರು ಸೇವಾ ದೀಕ್ಷಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಿ.ಬಿ.ವಿನಾಯಕ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ವರ್ತಕರಾದ ಅಣಬೇರು ಮಂಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಿತಿಯ ಸಂಸ್ಥಾಪಕರಾದವೇ, ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಅರುಣಕುಮಾರ್, ಪಾಲಿಕೆ ಆಯುಕ್ತರಾದ ರೇಣುಕಾ,ಮೇಯರ್  ವಿನಾಯಕ ಪೈಲ್ವಾನ್,ಲೆಕ್ಕ ಪರಿಶೋಧಕರಾದ ಅಥಣಿ ವೀರಣ್ಣ,ಮಾಜಿ ಮೇಯರ್  ಎಸ್‌. ಟಿ. ವೀರೇಶ ಆಗಮಿಸಲಿದ್ದಾರೆ.ಸಂಗೀತ ಶಿಕ್ಷಕಶಿವಬಸಯ್ಯ ಪಿ. ಚರಂತಿಮಠ ಉಪಸ್ಥಿತರಿರುವರು ಎಂದರು.ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ ಮಾತನಾಡಿ ಇದೇ ವೇಳೆ ‘ಪುಟ್ಟರಾಜಗುರು ವಚನ ಪ್ರಭಾ’ ವಚನ ವಿಶ್ಲೇಷಣೆ ಸಂಕಲನದ ಪುಸ್ತಕ ಲೋಕಾರ್ಪಣೆ ನಡೆಯಲಿದೆ.ಆನಂದ ಆರ್ ಪಾಟೀಲ್,ಎಂ.ಕೆ ರೇವಣಸಿದ್ದಪ್ಪ ಅವರುಗಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಕು. ಸುಪ್ರಿತಿ ಹಾಗೂ ಕಲಾ ಕಲ್ಪ ಕಲಾ ಶಾಲೆ  ವಿದ್ಯಾರ್ಥಿಗಳಿಂದ ಭರತನಾಟ್ಯ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎನ್.ಹೆಚ್ ಪುಷ್ಪ,ಮಮತಾ ನಾಗರಾಜ್,ಮಧುಮತಿ ಗಿರೀಶ್,ಆರ್.ಎಸ್ ರಾಜಶ್ರೀ,ಎಚ್.ಎಸ್ ಶಶಿಕಲಾ ,ಆರ್.ಶಾನ್ವಿ ಉಪಸ್ಥಿತರಿದ್ದರು.