ಜೂ.೧೧ರಿಂದ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ.- ರಾಯರೆಡ್ಡಿ.  


ಸಂಜೆವಾಣಿ ವಾರ್ತೆ
ಕುಕನೂರು, ಜೂ.09: ಸರಕಾರದ ನಿಯಮದಂತೆ ಜೂ.೧೧ರಿಂದ ರಾಜ್ಯದ ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣದ ಸೌಲಭ್ಯಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದರು. ಶುಕ್ರವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದರು. ಶೇ.೫೦ರಷ್ಟು ಮಹಿಳೆಯರಿಗೆ ಆಸಾನ ಮಿಸಲಿದ್ದು. ರಾಜ್ಯದ ಮೂರೂವರೆ ಕೋಟಿ ಮಹಿಳೆಯರಿಗೆ ವಿಶೇಷ ಸೌಲಭ್ಯ ಪಡೆಯಲಿದ್ದಾರೆ. ಯಲಭುಗಾ೯ ಕುಕನೂರು ಭಾಗದಿಂದ ಜೂನ್ ೧೧ರಂದು ಮಧ್ಯಾಹ್ನ ೧ ಧಮ೯ಸ್ಥಳ ಕ್ಕೆ ಹೊರಡುವ ಬಸ್ ಗೆ ಚಾಲನೆ ನೀಡಲಾಗುವುದು. ಅದರಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಮಹಿಳೆಯರು ಮೂಲ ದಾಖಲೆ ತೋರಿಸಿ ಪ್ರಯಾಣಿಸಬೇಕು ಎಂದು ತಿಳಿಸಿದರು. ಮೂರು ತಿಂಗಳ ನಂತರ ಎಲ್ಲಾ ಮಹಿಳೆಯರಿಗೆ ಸ್ಮಾಟ೯.     ಕಾಡು೯ ವಿತರಿಸಲಾಗುವುದು, ಕುಕನೂರು ಬಸ್ ನಿಲ್ದಾಣವನ್ನು ಶೀಘ್ರ ಸುಣ್ಣ ಬಣ್ಣ ಹಚ್ಚಿ ಉದ್ಘಾಟನೆ ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ನಾನು ಅರೆ ಸರಕಾರಿ  ಶಾಸಕ ಹೀಗಾಗಿ ಹೆಚ್ಚಿನ ಮಾಹಿತಿ ಮಂಟ್ರಿಗಿದೆ ಎಂದು ತಿಳಿಸಿದರು. ಈ ಸಂದಭ೯ದ ಲ್ಲಿ ಸಾರಿಗೆ ಅಧಿಕಾರಿ ಆರ್.ಬೀ.ಜಾಧವ್, ಮುಖಂಡರಾದ ಬಸವರಾಜ್ ಉಳ್ಳಾಗಡ್ಡಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಡಾಕ್ಟರ್ ಮಲ್ಲಿಕಾಜು೯ನ ಬಿನ್ನಾಲ ,ಸಿದ್ದಯ್ಯ ಕಲ್ಲಿಮಠ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.