ಜೂ. ಎನ್‌ಟಿಆರ್‌ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್

ಕೆಜಿಎಫ್ ಚಿತ್ರದ ಯಶಸ್ಸಿನ ಬಳಿಕ ಪರಭಾಷೆಯ ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡಿರುವ ಹೆಸರು ಪ್ರಶಾಂತ್ ನೀಲ್. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಪ್ರಶಾಂತ್ ಹೆಸರು ಜೋರಾಗಿ ಕೇಳಿ ಬರುತ್ತಿದೆ. ತೆಲುಗಿನ ಯಶಸ್ವಿ ನಟ ಪ್ರಭಾಸ್ ಅವರಿಗೆ “ಸಾಲರ್ ಚಿತ್ರ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ನೀಲ್ ಇದೀಗ ತೆಲುಗು ಚಿತ್ರರಂಗದ ಯಂಗ್ ಟೈಗರ್ ಜ್ಯೂ.ಎನ್ಟಿಆರ್ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ತೆಲುಗಿನಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಚಿತ್ರೀಕರಣದ ಹಂತದಲ್ಲಿ ರುವಾಗಲೇ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಪ್ರಶಾಂತ್ ನೀಲ್ ಗೆ ಅವಕಾಶ ಒದಗಿಬಂದಿದೆ.
ಜೂನಿಯರ್ ಎನ್ ಟಿ ಆರ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಕಳೆದೆರಡು ತಿಂಗಳುಗಳಿಂದ ಯಂಗ್ ಟೈಗರ್ ಜೊತೆಗೆ ಪ್ರಶಾಂತ್ ಕೆಲಸ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಹುಟ್ಟುಹಬ್ಬಕ್ಕೆ ಶುಭ ಕೋರಿ ನಮ್ಮಿಬ್ಬರ ಕಾಂಬಿನೇಶನ್ದಲ್ಲಿ ಪ್ರಾಜೆಕ್ಟ್ ಶುರುವಾಗಲಿದೆ ಎಂದು ಹೇಳವ ಮೂಲಕ ಸುದ್ದಿ ಖಚಿತಪಡಿಸಿದ್ದಾರೆ. ಮೈತ್ರಿ ಮೂವೀಸ್ ಸಂಸ್ಥೆ ನಿರ್ಮಾಣದ ಜವಬ್ದಾರಿ ಹೊತ್ತುಕೊಂಡಿದೆ.
‘ರಕ್ತದಲ್ಲಿ ಸೋಕಿದ ಮಣ್ಣೋಂದೇ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಮಣ್ಣು’ ಎಂದು ನಿರ್ದೇಶಕರು ಟ್ವೀಟ್ದಲ್ಲಿ ಹೇಳಿರುವ ಸಾಲು ನೋಡಿದರೆ ಇದೊಂದು ಮಾಸ್ ಆಕ್ಷನ್ ಚಿತ್ರ ಎನ್ನುವ ಸೂಚನೆ ನೀಡಿದೆ.
ಜೂನಿಯರ್ ಎನ್ ಟಿಆರ್ ಯಶಸ್ವಿ ನಿರ್ದೇಶಕ ರಾಜಮೌಳಿ ಅವರ ‘ಆರ್ ಆರ್ ಆರ್ ದಲ್ಲಿ ಬ್ಯುಸಿ ಆಗಿದ್ದಾರೆ. ಆದಾದ ಬಳಿಕ ಕೊರಟಾಲಶಿವ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾದ್ಯತೆಗಳಿವೆ.ಆ ನಂತರವಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾದ್ಯತೆಗಳಿವೆ.