ಜೂನ್-8 ವಿಶ್ವ ಸಾಗರ ದಿನಾಚರಣೆ “ಕಡಲು ಮಾಲಿನ್ಯ ರಹಿತವಾಗಿರಿಲಿ”

ದಾವಣಗೆರೆ.ಜೂ.೮; ಸಮುದ್ರ ಮಾಲಿನ್ಯ ತಡೆಗಟ್ಟಲು ಮತ್ತು ಆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್-8 ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತದೆ. ಸಮುದ್ರ ಮಾಲಿನ್ಯ ತಡೆಗಟ್ಟುವ ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ದೇಶದೆಲ್ಲಡೆ ಸ್ವಚ್ಚ ಸುಂದರ ಭಾರತ ನಿರ್ಮಾಣದ ಗುರಿ ಹೊಂದಿರುವಾಗಲೇ ನಮ್ಮ ನೆಲೆಯ ಸಮುದ್ರವನ್ನು ಕೂಡ ಸ್ವಚ್ಚ ಹಾಗೂ ಮಾಲಿನ್ಯ ರಹಿತವಾಗಿ ರೂಪಿಸುವ ಮಹಾನ್ ಸಂಕಲ್ಪ ನಮ್ಮದಾಗಬೇಕು.
ಸ್ವಚ್ಚ ಕಡಲು ಆಧ್ಯೆತೆಯಾಗಲಿ.ಸ್ವಚ್ಚ ಕಡಲು ನಮ್ಮ ಆಧ್ಯೆತೆಯಾಗಬೇಕು.ಕಡಲಿನ ದಡವೂ ಸ್ವಚ್ಚವಾಗಬೇಕು. ಕಡಲಿನಲ್ಲಿ ಸಂಚರಿಸುವ ಮೀನುಗಾರಿಗೆ ದೋಣಿಗಳು, ಸಮುದ್ರ ಸ್ವಚ್ಚತೆಗೆ ವಿಶೇಷ ಆಧ್ಯತೆ ನೀಡಬೇಕಿದೆ. ಈಗ ಮೀನುಗಾರಿಕಾ ದೋಣಿಗಳು ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಇನ್ನಷ್ಟು ಪರಿಪೂರ್ಣ ಜಾಗೃತಿ ನಡೆಸಿದೆರೆ ದೊಡ್ಡ ಅತಂಕವನ್ನು ನಿವಾರಿಸಿದಂತಾಗುತ್ತದೆ.
ಅಪಾಯಕ್ಕೆ ಸಿಲುಕಿದ ಹಡಗುಗಳ ತೆರವು ಶ್ರೀಘ್ರವಾಗಲಿ.ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ನೀರಿನಲ್ಲಿ ಮುಳುಗುವ ದೋಣಿ, ಹಡಗು ತೆರವು ಮಾಡುವ ಕಾರ್ಯ ಕೂಡ ಆದಷ್ಟು ಬೇಗನೇ ಆಗಬೇಕು. ಯಾಕೆಂದg, ಇತ್ತೀಚೆಗೆ ಕರಾವಳಿ ವ್ಯಾಪ್ತಿಯಲ್ಲಿ ನಡೆದ, ಕೆಲವು ಹಡಗು ದುರಂತ ಘಟನೆಯಲ್ಲಿ ಮೊದಲಿಗೆ ಅದರಲ್ಲಿನ ತೈಲ ಸೋರಿಕೆಯಾಗಿ ನೀರಿಗೆ ಸೇರ್ಪಡೆಗೊಂಡ ಘಟನೆ ನಡೆಯಿತು. ಇದೇ ನೀರು ಮೀನಿಗೆ ದೊರೆತು ಮತ್ತೇ ಮನುಷ್ಯ ದೇಹ ಸೇರುವ ಅಪಾಯವೂ ಇದೆ, ಹಾಗಾಗಿ ಕಡಲಿನಲ್ಲಿ ಸ್ವಚ್ಚತೆ ಹಾಗೂ ಸಂರಕ್ಷಣೆ ಕುರಿತಾಗಿ ವಿಶೇಷ ಒತ್ತು ನೀಡಬೇಕಾದ ಅವಶ್ಯಕೆತೆಯಿದೆ.
ಸಮುದ್ರ ತೀರವೂ ಸ್ವಚ್ಚವಾಗಿರಲಿ. ಕರಾವಳಿಯ ಸಮುದ್ರ ತೀರಗಳ ಪ್ರವಾಸೋದ್ಯಮದ ಮುಖ್ಯ ತಾಣಗಳು ಇಲ್ಲಿಗೆ ದೂರ ದೂರಿನಿಂದ ಜನರು ಆಗಮಿಸುತ್ತಾರೆ, ತಾಸುಗಟ್ಟಲೆ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಾರೆ. ಆನರು ತಿಂಡಿ-ತಿನಿಸು ತಿಂದು ಸಮುದ್ರ ದಡದಲ್ಲಿ ಹಾಕಿ ಹೋಗುವವರೂ ಇದ್ದಾರೆ. ಕೆಲವರಂತೂ ಇನ್ನೂ ಸ್ವಲ್ಪ ಮುಂದೆ ಹೋಗಿ ಸಮುದ್ರದ ನೀರಿಗೆ ಹಾಕುತ್ತಾರೆ. ಇಂತಹ ಚಟುವಟಿಕೆಗಳುಇಗೆ ಮೊದಲು ಕಡಿವಾಣ ಬೀಳಬೇಕಿದೆ. ಬೀಚ್‌ಗಳನ್ನು ಸ್ವಚ್ಚವಾಗಿಡುವ ಮೂಲಕ ಸಾಗರವನ್ನು ನಾವೇ ಸ್ವಚ್ಚವಾಗಿಡೋಣ.
2008 ರಿಂದ ವಿಶ್ವ ಸಾಗರ ದಿನಾಚರಣೆ ಜಾರಿಗೆ ಬಂದ ಹಿನ್ನಲೆ.ವಿಶ್ವ ಸಾಗರ ದಿನವನ್ನು ಮೊದಲಿಗೆ 1992 ರಲ್ಲಿ ಆನ್ ಅಫೀಶಿಯಲ್ ಆಗಿ ಹಲವು ದೇಶಗಳಲ್ಲಿ ಎನ್.ಜಿ.ಓ ಹಾಗೂ ಸಂಘ ಸಂಸ್ಥೆಗಳ ಮುಖಾಂತರ ಆಚರಿಸಲಾಯಿತು. ಅನಂತರ ವಿಶ್ವದಾಧ್ಯಂತ ಸುಮಾರು 2000 ಸಂಘ ಸಂಸ್ಥೆಗಳು ವಿಶ್ವ ಸಾಗರ ದಿನವನ್ನು ಪ್ರಚಾರ ಪಡಿಸುವ ಮೂಲಕ ವಿಶ್ವ ಸಂಸ್ಥೆಯ ಮನ್ನಣೆ ಪಡೆಯುವುದಕ್ಕೋಸ್ಕರ ಮೂರು ವರ್ಷಗಳ ಕಾಲ ಬೇಡಿಕೆ ಚಳುವಳಿಯ ರೀತಿಯಲ್ಲಿ ಈ ದಿನವನ್ನು ಆಚರಿಸಿದರು. ಇದರ ಫಲವಾಗಿ ವಿಶ್ವಸಂಸ್ಥೆ 2008 ರಂದು ಇದಕ್ಕೆ ಅಂಗೀಕಾರವನ್ನಿಟ್ಟು ಜೂನ್ 8 ರಂದು ವಿಶ್ವ ಸಾಗರ ದಿನವನ್ನಾಗಿ ಎಲ್ಲಾ ದೇಶಗಳಲ್ಲಿ ಆಚರಿಸುವ ಮೂಲಕ ಸಾಗರ ಸಂರಕ್ಷಣೆ ಕಾರ್ಯ ಮಾಡಲಾಗುತ್ತಿದೆ.2021 ವರ್ಷ ಘೋಷ ವಾಕ್ಯ: “ಖಿhe ಖಿheme oಜಿ ತಿoಡಿಟಜ oಛಿeಚಿಟಿs ಆಚಿಥಿ-2021 is ‘ಖಿhe ಔಛಿeಚಿಟಿ ಟiಜಿe ಚಿಟಿಜ ಟiveಟihooಜs” ಕನ್ನಡ ಭಾಷಾರ್ಥ “ಸಾಗರ :ಜೀವನ ಮತ್ತು ಜೀವನೋಪಾಯ”ವಿಶ್ವ ಸಾಗರ ದಿನವು ನಮ್ಮ ಜೀವನದಲ್ಲಿ ಸಾಗರಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಅವು ಹದಗೆಡದಂತೆ ರಕ್ಷಿಸುವ ಕಾರಣವನ್ನು ಒತ್ತಿಹೇಳುತ್ತವೆ. ಸಾಗರಗಳಲ್ಲಿನ ಇತ್ತೀಚಿನ ಪ್ಲಾಸ್ಟಿಕ್ ತ್ಯಾಜ್ಯವು ಹುಬ್ಬುಗಳನ್ನು ಹೆಚ್ಚಿಸಿದೆ ಮತ್ತು ವಿಶ್ವದ ಸರ್ಕಾರಗಳು ಪೂರ್ವಭಾವಿಯಾಗಿರಬೇಕು ಎಂದು ಕರೆ ನೀಡಿದೆ.ಈ ವರ್ಷದ ವಿಷಯವೆಂದರೆ ಸಾಗರ: ಜೀವನ ಮತ್ತು ಜೀವನೋಪಾಯ.
-;;ವಿಶ್ವ ಸಾಗರ ದಿನದ ಮಹತ್ವ:;-ಗೌರವಿಸುವುದರಲ್ಲಿ ಮಾತ್ರವಲ್ಲದೆ ನಮ್ಮ ಸಾಗರಗಳನ್ನು ಸಂರಕ್ಷಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಈ ದಿನವು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ.ನಮ್ಮ ಜೀವನದಲ್ಲಿ ಸಾಗರದ ಪ್ರಾಮುಖ್ಯತೆ ಮತ್ತು ಅದನ್ನು ನಾವು ರಕ್ಷಿಸುವ ವಿಧಾನಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಜೂನ್ 8 ರಂದು ಇದನ್ನು ಆಚರಿಸಲಾಗುತ್ತದೆ.ನಮ್ಮ ಹಂಚಿಕೆಯ ಸಾಗರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಭಾಗವಹಿಸುವುದು ಮತ್ತು ಕೊಡುಗೆ ನೀಡುವುದು ವ್ಯಕ್ತಿಯ ಕರ್ತವ್ಯ. ಆದ್ದರಿಂದ, ನಮ್ಮ ಗ್ರಹಕ್ಕೆ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಮುದಾಯದೊಂದಿಗೆ ಒಗ್ಗೂಡಿರುವುದು ಅಪೇಕ್ಷಣೀಯವಾಗಿದೆ.
“ನೀರಿಲ್ಲದೆ, ನಮ್ಮ ಗ್ರಹವು ಶಾಯಿ-ಕಪ್ಪು ಅನೂರ್ಜಿತತೆಯ ವಿಶಾಲತೆಯಲ್ಲಿ ಅನಂತವಾಗಿ ತೇಲುತ್ತಿರುವ ಶತಕೋಟಿ ನಿರ್ಜೀವ ಬಂಡೆಗಳಲ್ಲಿ ಒಂದಾಗಿದೆ” ಎಂದು ಸರಿಯಾಗಿ ಹೇಳಲಾಗಿದೆ. – ಫ್ಯಾಬಿಯನ್ ಕೂಸ್ಟಿಯೊ
ಸಾಗರಗಳು ನಮ್ಮ ಗ್ರಹದ ಶ್ವಾಸಕೋಶಗಳಾಗಿವೆ; ಆಹಾರ ಮತ್ತು meಜiಛಿiಟಿe ಷಧದ ಪ್ರಮುಖ ಮೂಲ ಮತ್ತು ಜೀವಗೋಳದ ನಿರ್ಣಾಯಕ ಭಾಗವಾದ ಉಸಿರಾಟಕ್ಕೆ ಆಮ್ಲಜನಕವನ್ನು ಒದಗಿಸುತ್ತದೆ.ನಮ್ಮ ಇಡೀ ಭೂಮಿಯ 3/4 ನೇ ಭಾಗವು ನೀರಿನಿಂದ ತುಂಬಿದೆ ಎಂದು ನಮಗೆ ತಿಳಿದಿದೆ; ಜಾಗತಿಕ ತಾಪಮಾನ ಏರಿಕೆಯ ಅಪಾಯದಿಂದ ನಮ್ಮ ಸಾಗರ ಮತ್ತು ಸಮುದ್ರ ಜೀವಗಳನ್ನು ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ವಿಶ್ವ ಸಾಗರ ದಿನವು ನೀರಿನ ಸಮತೋಲನವನ್ನು ಉಳಿಸಲು ಮತ್ತು ಭೂಮಿಯ ಮೇಲಿನ ಜೀವಗಳಿಗೆ ಒಂದು ದೊಡ್ಡ ಹೆಜ್ಜೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.ಸಾಗರದಲ್ಲಿನ ಎಲ್ಲಾ ಮಾಲಿನ್ಯದ 80% ಭೂಮಿಯಿಂದ ಬರುತ್ತದೆ.ವರ್ಷಕ್ಕೆ ಸುಮಾರು 8 ಮಿಲಿಯನ್ ಟನ್ ಪ್ಲಾಸ್ಟಿಕ್ ಸಾಗರದಲ್ಲಿ ಕೊನೆಗೊಳ್ಳುತ್ತದೆ.ಪ್ಲಾಸ್ಟಿಕ್ ಮಾಲಿನ್ಯದಿಂದ ಸುಮಾರು 1 ಮಿಲಿಯನ್ ಸಮುದ್ರ ಪಕ್ಷಿಗಳು ಮತ್ತು ವರ್ಷಕ್ಕೆ ಸುಮಾರು 100,000 ಸಮುದ್ರ ಪ್ರಾಣಿಗಳ ಜೀವನವು ಪರಿಣಾಮ ಬೀರುತ್ತದೆ.ಆದ್ದರಿಂದ, ಮೀನುಗಳು ಪ್ಲಾಸ್ಟಿಕ್ ತಿನ್ನುತ್ತವೆ ಮತ್ತು ನಾವು ಮೀನುಗಳನ್ನು ತಿನ್ನುತ್ತೇವೆ ಎಂಬುದು ಸ್ಪಷ್ಟ. ಸಾಗರ ಸಂರಕ್ಷಣೆಯ ನಮ್ಮೆಲ್ಲರ ರಕ್ಷಣೆಯಾಗಿದೆ ಇದಕ್ಕೆ ಎಲ್ಲರೂ ಕೈಜೋಡಿಸೋಣ ಬನ್ನಿ……….. ಎಸ್.ಮರಳಸಿದ್ದೇಶ್ವರ.
– ಶಿವಪುರ.ಹೊಳಲ್ಕೆರೆ.