ಜೂನ್ 25 ರಂದು ಸಭೆ

ಧಾರವಾಡ,ಜೂ.22: ಜೂನ್ 25 ರಂದು ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾ ಪೊಲೀಸ್ ಹೆಡ್ ಕ್ವಾಟರ್ಸ್‍ದ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅನುಸೂಚಿತ ಜಾತಿ ಮತ್ತು ಅಮನುಸೂಚಿತ ಪಂಗಡದವರ ಕುಂದುಕೊರತೆಗಳ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸದರಿ ಸಭೆಗೆ ಜಿಲ್ಲೆಯ ಎಲ್ಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರ ಮುಖಂಡರು ಹಾಗೂ ಕುಂದು ಕೊರತೆ ಹೊಂದಿರುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರು ಭಾಗವಹಿಸಿ, ಸಮಸ್ಯ ಪರಿಹರಿಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.