ಜೂನ್ 21 ರಿಂದ ಎಲ್ಲಾರಿಗೂ ಕೊರೋನ ಲಸಿಕೆ

ಹೊಸನಗರ.ಜೂ.೮; ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ರಾಜ್ಯ ಎಂಎಸ್‌ಐಎಲ್ ಸಂಸ್ಥೆಯ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿದರು.ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನದಲ್ಲಿ ಈ ವರಗೆ ಸುಮಾರು 30 ಸಾವಿರ ಲಸಿಕೆ ನೀಡಲಾಗಿದೆ. ಸರ್ಕಾರದ ಅದೇಶದಂತೆ ಇಂದು ಆದ್ಯತೆ ಮೇರೆಗೆ ಆಟೋ, ಟ್ಯಾಕ್ಸಿಯಂತ ವಾಹನ ಚಾಲಕರಿಗೆ ಕೊವೀಡ್ ಲಸಿಕೆ ನೀಡು ಕ್ರಮಕೈಗೊಳ್ಳಲಾಗಿದೆ. ಕೊರೋನ ತಡೆಗೆ ಪ್ರಧಾನಿ ಮೋದಿ ಅವಿರತ ಶ್ರಮಿಸುತ್ತಿದ್ದು, 18 ವಯೋಮಾನ ಮೀರಿದ ನಾಗರೀಕರಿಗೆ ಜೂನ್ 21ರಿಂದ ದೇಶಾದ್ಯಂತ ಉಚಿತ ಲಸಿಕೆ ನೀಡಲು ಆದೇಶಿಸಿದ್ದಾರೆ. ಜೊತೆಗೆ ಕೊವೀಡ್‌ನಂತ ಸಂದಿಗ್ಧ ಸ್ಥಿತಿಯಲ್ಲಿ ನವೆಂಬರ್ ತಿಂಗಳವರೆಗೆ ದೇಶದ ಒಟ್ಟು 80 ಕೋಟಿ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಪಡಿತರ ನೀಡಲು ಸೂಚಿಸಿರುವ ಅವರ ಕ್ರಮ ಶ್ಲಾಘನೀಯವಾಗಿದೆ. 2021ರ ಅಂತ್ಯದೊಳಗೆ ಕೊರೋನ ರೋಗವನ್ನು ದೇಶದಿಂದಲೇ ಹೊಡೆದೊಡಿಸಲು ಅವರು ಪಟ್ಟ ತೊಟ್ಟಿದ್ದು, ಇದಕ್ಕೆ ಪ್ರತಿಯೊಬ್ಬ ನಾಗರೀಕರ ಸಹಕಾರದ ಅಗತ್ಯವಿದೆ. ಇದಕ್ಕೆ ಪ್ರತಿಯೊಬ್ಬರು ಲಸಿಕೆ ಪಡೆಯುವುದೊಂದೇ ಪರಮಗುರಿ ಆಗಿದೆ ಎಂದರು.ಈ ವೇಳೆ ಇಓ ಪ್ರವೀಣ್, ಎಸ್‌ಐ ರಾಜೇಂದ್ರ ನಾಚಿiÀiï್ಕ, ತಾಲೂಕು ವೈದ್ಯಾಧಿಕಾರಿ ಡಾ|| ಸುರೇಶ್, ಡಾ|| ಶಾಚಿತರಾಜ್, ಸಾಗರವಿಭಾಗರದ ಎಆರ್‌ಟಿಓ, ಪ್ರಮುಖರಾದ ಎನ್.ಆರ್. ದೇವಾನಂದ್, ಎಂ.ಎನ್. ಸುಧಾಕರ್, ಪ.ಪಂ. ಸದಸ್ಯೆ ಗುಲಾಬಿ ಮರಿಯಪ್ಪ, ಮಾಜಿ ಸದಸ್ಯ ಎಂ.ವಿ. ಮಲ್ಲಿಕಾರ್ಜುನ, ಮಂಡಾನಿ ಮೋಹನ್, ಬಸವರಾಜ್ ಮೊದಲಾದವರು ಇದ್ದರು.