ಗದಗ,ಜೂ.16: ಮುಂಡರಗಿ ತಹಶೀಲ್ದಾರ ಕಾರ್ಯಾಲಯದಲ್ಲಿ ಎಲ್‍ಸಿಡಿಸಿ ತಾಲೂಕಾ ಸಮನ್ವಯ ಸಮಿತಿ ಸಭೆಯು ತಹಶೀಲ್ದಾರರಾದ ಶೃತಿ ಮಲ್ಲಪ್ಪಗೌಡರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಂಡರಗಿ ತಹಶೀಲ್ದಾರರಾದ ಶೃತಿ ಮಲ್ಲಪ್ಪಗೌಡರ ಮಾತನಾಡಿ ಜೂನ್ 19 ರಿಂದ ಜುಲೈ 6 ರವರೆಗೆ ತಾಲೂಕಿನಾದ್ಯಂತ ಕುಷ್ಟ ರೋಗ ಪತ್ತೆ ಆಂದೋಲವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕುಷ್ಟರೋಗವನ್ನು ತ್ವರಿತ ಪತ್ತೆ ಹಚ್ಚಿ ಪ್ರಾರಂಭದಲ್ಲಿ ಚಿಕಿತ್ಸೆ ನೀಡುವುದು ಈ ಆಂದೋಲನದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿವಿಧ
ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.
ಆರೋಗ್ಯ ಇಲಾಖೆಯ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಕುಷ್ಠರೋಗ ಸಮೀಕ್ಷಾ ಕಾರ್ಯಕ್ಕೆ ಬರಲಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮ ಪಂಚಾಯತ್ ಪಿ.ಡಿ.ಓಗಳ ಮೂಲಕ ಗ್ರಾಮಗಳಲ್ಲಿ ಅಭಿಯಾನದ ಕುರಿತು ಡಂಗುರ ಸಾರುವ ಮೂಲಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರು ಸೂಚಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಜೇಶ ಟಿ ಎಸ್ ಇವರು ಮಾತನಾಡಿ, ಜೂನ್ 19 ರಿಂದ ಜುಲೈ 6 ರವರೆಗೆ ತಾಲೂಕಿನ್ಯಾದಂತ ಕುಷ್ಠರೋಗ ಪತ್ತೆ ಅಭಿಯಾನ (ಎಲ್.ಸಿ.ಡಿಸಿ) ಜರುಗಲಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅಂಗನಾಡಿ ಕಾರ್ಯಕರ್ತೆಯರು ಮತ್ತು ಸ್ವಯಂ ಸೇವಕರು ಎಲ್ ಸಿ ಡಿ ಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಒಂದು ತಂಡದಲ್ಲಿ ಇಬ್ಬರು ಕಾರ್ಯಕರ್ತರು ಇರಲಿದ್ದು ಮನೆ ಮನೆ ಭೇಟಿ ಮಾಡಿ, ಸಾರ್ವಜನಿಕರಿಗೆ ಕುಷ್ಠರೋಗದ ಬಗ್ಗೆ ಆರೋಗ್ಯ ಶಿಕ್ಷಣ ನೀಡುವರು.ಮನೆಯಲ್ಲಿರುವ ಒಟ್ಟು ಸದಸ್ಯರನ್ನು ಪರೀಕ್ಷೆ ಮಾಡಿ. ಆ ಮನೆಗೆ ಕುಷ್ಠರೋಗ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಮನೆಯ ಮೇಲೆ ನಮೂದಿಸಲಿದ್ದಾರೆ, ಒಂದು ವೇಳೆ ಮನೆಯಲ್ಲಿ ಚರ್ಮ ತಪಾಸಣೆಗೆ ಒಳಗಾಗುವರು ಉಳಿದುಕೊಂಡಲ್ಲಿ ಆ ಮನೆಯ ಮೇಲೆ ಎಕ್ಸ್ ಎಂದು ಗುರುತಿಸಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಎಮ್ ಎಸ್ ಸಜ್ಜನರ ಮಾತನಾಡಿ ಒಟ್ಟು ನಮ್ಮ ರಾಜ್ಯದಲ್ಲಿ ಕೇವಲ 12 ಜಿಲ್ಲೆಯಲ್ಲಿ ಮಾತ್ರ ಈ ಅಭಿಯಾನ ಕಾರ್ಯಕ್ರಮವು ಜರುಗಲಿದೆ. ಅದರಲ್ಲಿ ಮುಂಡರಗಿ ತಾಲೂಕಿನಲ್ಲಿ 141 ತಂಡಗಳ ರಚನೆ ಮಾಡಿದ್ದು, ಒಟ್ಟು 29079 ಮನೆಗಳನ್ನು ಸಮೀಕ್ಷೆ ಮಾಡಲಿದ್ದಾರೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಯುವರಾಜ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಮ್ ಎಮ್ ಇಸರನಾಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿ ಬಿ ಬಸವಣ್ಣಪ್ಪ್ಪ ಹಾಗೂ ಪುರಸಭೆಯ ಆರೋಗ್ಯ ನಿರಿಕ್ಷಣಾಧಿಕಾರಿ ಮ್ಯಾಗೇರಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.