ಜೂನ್-1 ವಿಶ್ವ ಹಾಲು ದಿನಾಚರಣೆಯ ಶುಭಾಶಯಗಳು”

 ಹೊಳಲ್ಕೆರೆ. ಮೇ.೩೧; ಜೂನ್-1 “ವಿಶ್ವ ಹಾಲು ದಿನಾಚರಣೆ” ಇದರ ಪ್ರಯುಕ್ತ ಕರ್ನಾಟಕ ಹಾಲು ಮಹಾಮಂಡಳಿ(ಕೆ.ಎಂ.ಎಫ್) ಜೂನ್ 1 ರಿಂದ 31 ರವರೆಗೆ ಒಂದು ತಿಂಗಳು ಎಲ್ಲಾ ಶ್ರೇಣಿಯ ನಂದಿನಿ ಹಾಲಿನ ಪ್ರತಿ ಲೀಟರ್‌ಗೆ 40 ಎಂಎಲ್ ಹಾಗೂ ಅರ್ಧ ಲೀಟರ್‌ಗೆ 20 ಎಂಎಲ್ ಅದೇ ದರದಲ್ಲಿಯೇ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿರುವುದು ಗ್ರಾಹಕರಿಗೆ ತುಂಬಾ ಸಂತಸ ತಂದಿದೆ ಎಂದು ಹೊಳಲ್ಕೆರೆಯ ಎಸ್,ಮರಳಸಿದ್ಧೇಶ್ವರ ಹೇಳಿದ್ದಾರೆ.ಇಂತಹ ವಿಶೇಷ ರೀತಿಯ ಕೊಡುಗೆ ನೀಡಿರುವ ಕೆ,ಎಂ,ಎಫ್ ನವರಿಗೆ ಎಲ್ಲಾ ಗ್ರಾಹಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಹಾಲಿನ ಘಟಕ ನಿಗಮಕ್ಕೆ ಹಾಗೂ ಹಾಲು ಮಾರಾಟಗಾರರಿಗೆ ವಿಶ್ವ ಹಾಲು ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.