ಜೂನ್ ತಿಂಗಳಿಂದ ನಗರದಲ್ಲಿ ಸ್ಪರ್ಧಾ ಪರೀಕ್ಷೆಗಳ
 ತರಬೇತಿ ಕೇಂದ್ರ ಆರಂಭ: ಮಾಲಪಾಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,15- ನಗರದ ಸಾಂಸ್ಕೃತಿಕ‌ಸಮುಚ್ಚಯದ ಆವರಣದಲ್ಲಿ ಐದು ಕೋಟಿ ರೂ ವೆಚ್ಚದಲ್ಲಿ ಸ್ಟಡೀ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದೆ. ಈ ಹಿಂದಿನ ಜಿಲ್ಲಾಧಿಕಾರಿ ನಕುಲ್ ಅವರು ಆರಂಭಿಸಿದ್ದ ಯುಪಿಎಸ್ ಸಿ ಪರೀಕ್ಷಾ ತರಬೇತಿ‌ ಕೇಂದ್ರ ಕೋವಿಡ್ ಕಾರಣದಿಂದ ಮುಚ್ಚಿತು. ಜಿಲ್ಲೆಯಲ್ಲಿ ವಿದ್ಯಾವಂತ ಯುವಕರು ಸ್ಪರ್ಧಾ ಪರೀಕ್ಷೆಗಳನ್ನು ಎದುರಿಸಲು ಮತ್ತೆ ಬರುವ ಜೂನ್ ತಿಂಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಕೊಚಿಂಗ್ ಸೆಂಟರ್ ಆರಂಭಿಸಲಿದೆಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದ್ದಾರೆ.
ಅವರಿಂದು ಬಳ್ಳಾರಿ ಪತ್ರಕರ್ತರ ಒಕ್ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಈ ವಿಷಯ ತಿಳಿಸಿದರು.
ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಡಿಎಂಎಪ್ ನಿಧಿಯಲ್ಲಿ ವಿವಿಧ ಯೋಜನೆಗಳಿಗೆ 
542 ಕೋಟಿ ವೆಚ್ಚ ಮಾಡಿದೆಂದ ಅವರು. ಈ‌ನಿಧಿ ಬಳಕೆಗೆ ಜಿಲ್ಲೆಯಲ್ಲಿನ
ಇಂಜಿನೀಯರಿಂಗ್ ವಿಭಾಗಗಳು ಸಶಕ್ತವಾಗಿಲ್ಲ. ಕಾರಣ ರೆಗ್ಯುಲರ್ ಯೋಜನೆಗಳ ಕೆಲಸ ಮಾಡುತ್ತಾರೆ ಅಷ್ಟೇ, ಹೆಚ್ಚುವರ ಅನುದಾನದ ಕೆಲಸ ಗಳು ಆಗುತ್ತಿಲ್ಲ. ಅದಕ್ಕಾಗಿ ಡಿಎಂಎಫ್  ಮತ್ತು ಕೆಎಂಆರ್ ಇಸಿ ನಿಧಿ ಬಳಕೆಗೆ ಜಿಲ್ಲೆಗೆ  ಎರೆಡು ಇಂಜಿನೀಯರಿಂಗ್ ವಿಭಾಗಗಳನ್ನಿ ಆರಂಭಿಸಲು ಸಿಎಂ ಬಸವರಾಜ್ ಬೊಮ್ಮಾಯಿ  ಅವರು  ಹೇಳಿದ್ದಾರೆ. ಹಣಕಾಸು ಇಲಾಖೆಗೆ ಈ ಪ್ರಸ್ತಾವನೆ ಹೋಗಿದೆಂದರು.
ಸಂಡೂರು ಕ್ಷೇತ್ರದಲ್ಲಿ ಡಿಎಂಎಫ್ ಅನುದಾನದಡಿ‌ ಕುಡಿಯುವ ನೀರಿನ ಬಹು ಗ್ರಾಮ  ಯೋಜನೆಗಳನ್ನು ಅನುಷ್ಟಾನಗಿಳಿಸಲಾಗುತ್ತಿದೆ. ಅಲ್ಲಿನ ಇಂಜಿನೀಯರ್ ಗಳು ಈವರಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಕಾಮಗಾರಿ ಮಾಡಿದ್ದಾರೆ. ಇನ್ನು ಮುಂದೆ ಡಿಎಂಎಪ್ ಅನು್ಅನಸ ಕಾಮಗಾರಿ ಮಾಡಲಿದ್ದಾರೆಂದರು.
ರಸ್ತೆಗಳ ಅಭಿವೃದ್ಧಿ:
ನಗರದಲ್ಲಿ 14 ಕೋಟಿ ರೂ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡುತ್ತಿದೆ.
ಬರುವ ಒಂದು ತಿಂಗಳಲ್ಲಿ ಬಳ್ಳಾರಿ ನಗರದ ರಸ್ತೆಗಳ ಅಭಿವೃದ್ಧಿ ಆಗಲಿದೆ. ಗಡಗಿ ಚೆನ್ನಪ್ಪ ಸರ್ಕ್ ಲ್ ನಿಂದ ನಾರಾಯಣರಾವ್ ಪಾರ್ಕ್ ವರಗೆ ಬರುವ ಮೇ ಒಳಗೆ ಕಾಮಗಾರಿ ಮಾಡಲು ಸೂಚಿಸಿದೆ
ಅದೇ ರೀತಿ ಮೇ ಒಳಗೆ ರಾಜಕುಮಾರ್ ರಸ್ತೆಯನ್ನು ರಾಘವ ಕಲಂದಿರದಿಂದ  ಬೈಪಾಸ್ ವರೆಗೆ ಚತುಷ್ಪಥ ರಸ್ತೆಯನ್ನಾಗಿ ಕಾಮಗಾರಿ ಮುಗಿಸಲಿದೆಂದರು
ಜಿಲ್ಲಾಡಳಿತ ಭವನಕ್ಕೆ:
ನಗರದಲ್ಲಿನ ಜಿಲ್ಲಾಡಳಿತ ಭವನಕ್ಕೆ  ಕಚೇರಿಗಳ ಸ್ಥಳಾಂತರ ಕಾರ್ಯ ನಡೆದಿದೆ ಮಾರ್ಚ್ ಅಂತ್ಯ ಆಗಿರುವುದರಿಂದ ವಿಳಂಬವಾಗಿದೆ ಮುಂದಿನ ತಿಂಗಳು ತಹಸಿಲ್ದಾರ್, ತೋಟಗಾರಿಕೆ,  ಟ್ರಜರಿ, ಕೃಷಿ ಮೊದಲಾದ  ಕಚೇರಿಗಳು ಸ್ಥಳಾಂತರಗೊಳ್ಳಲಿವೆಂದರು.
ಸಿರುಗುಪ್ಪ ರಸ್ತೆಯಿಂದ ಅನಂತಪುರಂ ರಸ್ತೆ ಬೈ ಪಾಸ್ ರಸ್ತೆ, ಗ್ಯಾಮನ್ ಇಂಡಿಯಾದ ಬೈ ಪಾಸ್ ರಸ್ತೆಗಳನ್ನು 2 ಸಾವಿರ ಕೋಟಿ ರೂ ವೆಚ್ಚದಲ್ಲಿ ಮಾಡಲು ಸಧ್ಯದಲ್ಲೇ ಟೆಂಡರ್ ಕರೆಯಲಿದೆ.
ನೂರು‌ ಕೋಟಿ ರೂ ವೆಚ್ಚದಲ್ಲಿ ಸುಧಾಕ್ರಾಸ್  ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣ, ಮೋತಿ ಸರ್ಕಲ್ ಬಳಿಯ ರೈಲ್ವೇ ಓವೆ್ ಬ್ರಿಡ್ಜ್ ಅಗಲೀಕರಣಕ್ಜಸ ಡಿಪಿಆರ್ ಸಿದ್ದವಾಗಿದ್ದು. ಸಧ್ಯದಲ್ಲೇ ಟೆಂಡರ್ ಕರೆಯಲಿದೆಂದು ತಿಳಿಸಿದರು.
ಕೆಎಂಆರ್ ಇಸಿ:
ಕೆಎಂಆರ್ ಇಸಿ ನಿಧಿಯಡಿ 5800 ಕೋಟಿ ರೂಗಳನ್ನು ನಾಲ್ಕು ಜಿಲ್ಲೆಗಳ ಯೋಜನೆಗೆ ಸಧ್ಯ ಸಮ್ಮಿತಿ ದೊರೆತಿದೆ. ಇದರಡಿ ಸಂಡೂರು ತಾಲೂಕಿನಲ್ಲಿ ಆರೇಳು ಸಾವಿರ ಮನೆಗಳನ್ನು ನಿರ್ಮಿಸಲಿದೆ.
ಸಂಡೂರು ಪಟ್ಟಣಕ್ಕೆ 120 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರು ಒಳಚರಂಡಿ ವ್ಯವಸ್ಥೆ ಮಾಡುತ್ತಿದೆ.
ಆರೋಗ್ಯ ಕ್ಷೇತ್ರ ಸುಧಾರಣೆಗಾಗಿ  ಏಳು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ನಿರ್ಮಾಣ, ಮೂರು ಆಸ್ಪತ್ರೆಗಳನ್ನು 250 ಕೋಟಿ ರೂ ವೆಚ್ಚದಲ್ಲಿ ಮಾಡಲಿದೆಂದರು.
120 ಕೋಟಿ ರೂ ವೆಚ್ಚದಲ್ಲಿ ಮತ್ತೆ ವಿಮ್ಸ್ ನಲ್ಲಿ  500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸಧ್ಯದಲ್ಲೇ ಅನಮತಿ ದೊರೆಯಲಿದೆಂದರು.
ಸ್ಪಾಂಜ್ ಐರನ್ ನ  ಕಾರ್ಖಾನೆಗಳಿಂದ ಪರಿಸರಕ್ಕೆ ಧಕ್ಕೆ ಆಗುತ್ತಿರುವ ಬಗ್ಗೆ ದೂರು ಬಂದಿದೆ. ನಿಯಮ ಪಾಲಿಸಲು ಸೂಚಿಸಿ ಮೂರು ತಿಂಗಳ ಅವಧಿ ನೀಡಿತ್ತು. ಅದು ಮುಗಿದಿದೆ ಸರಿಪಡಿಸದವರ ಕಾರ್ಖಾನೆ ಮುಚ್ಚಿಸಲಿದೆಂದರು.
ಉತ್ತಮ ಗಾಲ್ವ ಅವರು ವೇಣಿವೀರಾಪುರ ಬಳಿ  ಉಕ್ಕು ಕಾರ್ಖಾನೆ ಮಾಡಲು ಮುಂದೆ ಬಂದಿದ್ದಾರೆ. ಸಧ್ಯದಲ್ಲೇ ಆರಂಭವಾಗಲಿದೆಂದರು.
ಏಳು ಕೋಟಿ ರೂ ವೆಚ್ಬಚದಲ್ಲಿ  ಹಳ್ಳಿಗಳ  ಮಕ್ಕಳು ಶಾಲೆಗೆ ಕರೆತರಲು ಬಸ್ ಗಳನ್ನು ಖರೀದಿಸಲಿದೆ ಎಂದು ಸಹ ತಿಳಿಸಿದರು.

One attachment • Scanned by Gmail