ಜೂನ್ ಅಂತ್ಯದವರೆಗೆ ಲಾಕ್ಡೌನ್ ಬೇಕು

ಬಳ್ಳಾರಿ, ಮೇ.31- ಜಿಲ್ಲೆಯಲ್ಲಿನ‌ ಕರೋನಾ ಪರಿಸ್ಥಿತಿ ‌ನೋಡಿದರೆ ಜೂನ್ ತಿಂಗಳ ಅಂತ್ಯದವರೆಗೆ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಆಸ್ಪತ್ರೆಗೆ ಧರ್ಮಸ್ಥಳ‌ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೊಡ ಮಾಡಿದ 10 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ಹಸ್ತಾಂತರಮಾಡಿ ಮಾತನಾಡುತ್ತಿದ್ದರು.
ಸದ್ಯ ರಾಜ್ಯಾದ್ಯಂತ ಅಷ್ಟೇ ಅಲ್ಲ ಬಳ್ಳಾರಿಯಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಆದರೆ  ಜೂನ್‌ 30ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡಿದರೆ  ಒಳ್ಳೆಯದು.
ಯಾಕೆಂದರೆ ಸೋಂಕು ಮತ್ತು ಮರಣ ಪ್ರಮಾಣ ಮತ್ತಷ್ಟು ಕಡಿಮೆಯಾಗಬೇಕಿದೆ. ಹೀಗಾಗಿ ಲಾಕ್ಡೌನ್ ಅವಶ್ಯಕತೆ ಇದೆ ಎಂದು ನನಗೆ ಅನಿಸುತ್ತಿದೆ. ಇದಕ್ಕೆ ಜನರ ಸಹಕಾರ ಅಗತ್ಯವಾಗಿ ಬೇಕು. ಸಹಕಾರ ಮಾಡಿ ಎಂದು ಮನವಿ‌ ಮಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಳ್ಳಾರಿ ಜಿಲ್ಲೆಗೆ 25 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನೀಡಿದ್ದು ಅವುಗಳಲ್ಲಿ  ನಗರಕ್ಕೆ 10  ನೀಡಿದೆಂದು ತಿಳಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಂಸ್ಥೆಯ ಮುಖಂಡರು ಇದ್ದರು.