ಜೂನಿಯರ್ ಚಿರುಗೆ 6 ತಿಂಗಳ ಸಂಭ್ರಮ

ಬೆಂಗಳೂರು,ಏ.೨೬- ನಟಿ ಮೇಘನಾ ಅವರ ಪುತ್ರ ಜೂನಿಯರ್ ಚಿರು ಆರು ತಿಂಗಳ ಸಂಭ್ರಮ., ಸರ್ಜಾ ಕುಟುಂಬ ಕುಟುಂಬದ ಕುಡಿಯ ಸುಂದರ ಫೋಟೋಶೂಟ್ ಮಾಡಿಸಿದ್ದು ವೈರಲ್ ಆಗಿದೆ.
ಸದ್ಯ ಆರರ ಸಂಭ್ರಮದಲ್ಲಿ ಪುಟ್ಟ ಚಿರು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಎಲ್ಲೆಡೆ ಶುಭ ಹಾರೈಕೆ ವ್ಯಕ್ತವಾಗಿದೆ
ಮೇಘನಾ ರಾಜ್ ಸರ್ಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗನ ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ.ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ಮಗ ಆರು ತಿಂಗಳನವನಾದ. ನಾನು ಮತ್ತು ತಂದೆ ಇಬ್ಬರು ಆತನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಬರೆದು ಆರರ ಸಂಭ್ರಮ ಆಯೋಜಿಸಿದ ಎಲ್ಲರಿಗೂ ಮೇಘನಾ ರಾಜ್ ಧನ್ಯವಾದ ಸಲ್ಲಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಮ್ಮನ ಮಗ ಅಂತ ಬರೆದುಕೊಂಡು ಮುದ್ದಾದ ಫೋಟೋವನ್ನ ಮೇಘನಾ ಹಂಚಿಕೊಂಡಿದ್ದರು.
ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಅಂತ ಕರೆಯುತ್ತಾಳೆ ಎಂದು ತಂದೆ ಸುಂದರ್ ರಾಜ್ ಹೇಳಿದ್ದರು.
ಅಕ್ಟೋಬರ್ ೨೨ರಂದು ಜೂನಿಯರ್ ಹುಟ್ಟಿದ ಕೂಡಲೇ ಮೇಘನಾ ಅವರ ಆಸೆಯಂತೆ ಮಗುವನ್ನ ಚಿರಂಜೀವಿ ಫೋಟೋ ಮುಂದೆ ಹಿಡಿದು ತೋರಿಸಲಾಗಿತ್ತು.