ಜೂನಿಯರ್ ಕಾಲೇಜುಗಳ ಕಳಂಕ ದೂರಮಾಡಿ

ಕೋಲಾರ,ಏ.೨೦: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರ ತಂದಿರುವ ‘ನನ್ನನ್ನೊಮ್ಮೆ ಗಮನಿಸಿಪ್ರಶ್ನೋತ್ತರ ಕೋಠಿಯಪ್ರಯೋಜನ ಪಡೆದು ಜಿಲ್ಲೆ ಫಲಿತಾಂಶ ಕುಸಿತಕ್ಕೆ ಜೂನಿಯರ್ ಕಾಲೇಜುಗಳು ಕಳಪೆ ಸಾಧನೆ ಕಾರಣವೆಂಬ ಕಳಂಕ ದೂರ ಮಾಡಿ ಎಂದು ಡಿಡಿಪಿಐ ಕೃಷ್ಣಮೂರ್ತಿ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ‘ನನ್ನನ್ನೊಮ್ಮೆ ಗಮನಿಸಿ ಪ್ರಥಮ ಭಾಷೆ ಉರ್ದು ಹಾಗೂ ತೃತೀಯ ಭಾಷೆ ಕನ್ನಡದ ಪ್ರಶ್ನೋತ್ತರ ಕೋಠಿ ಹಾಗೂ ಆರು ಸೆಟ್ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿ, ಉತ್ತಮ ಫಲಿತಾಂಶ ತಂದುಕೊಡಲು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಉರ್ದು ಪ್ರಥಮ ಭಾಷೆ ಹಾಗೂ ಕನ್ನಡ ತೃತೀಯ ಭಾಷೆ ಇರುವುದು ಜೂನಿಯರ್ ಕಾಲೇಜುಗಳಲ್ಲಿನ ಪ್ರೌಢಶಾಲಾ ವಿಭಾಗಗಳಲ್ಲಿಯೇ ಎಂದ ಅವರು, ಪ್ರತಿ ವರ್ಷವೂ ಜಿಲ್ಲೆಯ ಫಲಿತಾಂಶ ಕುಸಿತಕ್ಕೆ ಜೂನಿಯರ್ ಕಾಲೇಜುಗಳ ಕಳಪೆ ಸಾಧನೇಯೇ ಖಾರಣವೆಂಬ ಕಳಂಕವಿದೆ ಎಂದರು.
ಈ ಅಪವಾದದಿಂದ ದೂರವಾಗಲು ಈ ಬಾರಿ ಕಳಪೆ ಫಲಿತಾಂಶಕ್ಕೆ ಕಾರಣವಾದ ಉರ್ದು ಪ್ರಥಮ ಭಾಷೆ, ಹಾಗೂ ಕನ್ನಡ ತೃತೀಯ ಭಾಷೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಅನುವಾಗುವಂತೆ ‘ನನ್ನನ್ನೊಮ್ಮೆ ಗಮನಿಸಿ ಪ್ರಶ್ನೋತ್ತರ ಕೋಠಿಯನ್ನೇ ಮೊದಲು ಬಿಡುಗಡೆ ಮಾಡಲಾಗಿದೆ, ಇದರ ಪ್ರಯೋಜನ ಪಡೆದು ಉತ್ತಮ ಫಲಿತಾಂಶ ಗಳಿಸುವ ಮೂಲಕ ಜೂನಿಯರ್ ಕಾಲೇಜುಗಳಿಗೆ ಅಂಟಿರುವ ಕಳಂಕ ದೂರ ಮಾಡಿ ಎಂದು ಕಿವಿಮಾತು ಹೇಳಿದರು.
ಕೋವಿಡ್ ಎರಡನೇ ಅಲೆಯ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಮಕ್ಕಳು ಅಂಕ ಗಳಿಸುವ ಪ್ರಯತ್ನವಾಗಿ ಸಾರ್ವಜನಿಕ ಶಿಕ್ಷಣ ಇಲಾಕೆ ‘ನನ್ನನ್ನೊಮ್ಮೆ ಗಮನಿಸಿಪ್ರಶ್ನೋತ್ತರ ಕೋಠಿಯನ್ನು ಸಿದ್ದಪಡಿಸಿ ಒದಗಿಸಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದೇ ನಡೆಯುತ್ತದೆ, ಶಾಲೆಗಳಲ್ಲಿ ಈಗಾಗಲೇ ಶಿಕ್ಷಕರು ಪಠ್ಯ ಮುಗಿಸಿ, ಪುನರ್ಮನನ ಮಾಡುತ್ತಿದ್ದಾರೆ, ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಸಿಲಬಸ್ ಸಹಾ ಕಡಿತಗೊಳಿಸಲಾಗಿದೆ, ಪ್ರಶ್ನೆಗಳು ಸುಲಭವಾಗಿರಲಿದ್ದು, ಇದರ ಪ್ರಯೋಜನ ಪಡೆದು ಉತ್ತಮ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಕಳೆದ ವರ್ಷ ಕೇವಲ ಪ್ರಶ್ನೇಕೋಠಿ ಮಾತ್ರ ಮಾಡಿಕೊಡಲಾಗಿತ್ತು. ಆಗ ಕೋವಿಡ್ ಅಲೆಯ ನಡುವೆ ಉತ್ತರಗಳಿಗಾಗಿ ಮಕ್ಕಳು ತೊಂದರೆ ಅನುಭವಿಸಿದ್ದನ್ನು ಕಂಡು ಈ ಬಾರಿ ಪ್ರಶ್ನೋತ್ತರ ಕೋಠಿ ಸಿದ್ದಪಡಿಸಿ ನೀಡಲಾಗಿದೆ ಎಂದು ವಿವರಿಸಿದರು.
ಕಳೆದ ವರ್ಷ ಕೋವಿಡ್ ಹಿನ್ನಲೆಯಲ್ಲಿ ೧೦ ಫೋನ್ ಇನ್ ಕಾರ್ಯಕ್ರಮ ನಡೆಸಿದಾಗ ಅನೇಕ ಮಕ್ಕಳು ‘ನನ್ನನ್ನೊಮ್ಮೆ ಗಮನಿಸಿಪ್ರಶ್ನೆಕೋಠಿಗೆ ಉತ್ತರ ಸಿಗುತ್ತಿಲ್ಲ ಎಂದೆಲ್ಲಾ ಪ್ರಶ್ನೆ ಕೇಳಿದ್ದರು ಆದ್ದರಿಂದ ಈ ಬಾರಿ ಅಂತಹ ಸಮಸ್ಯೆ ಎದುರಾಗದಿರಲಿ ಎಂದು ಪ್ರಶ್ನೋತ್ತರ ಕೋಠಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಶ್ನೋತ್ತರ ಕೋಠಿ ಆವರೇಜ್, ಬಿಲೋಆವರೇಜ್ ಮತ್ತು ಅತ್ಯುನ್ನತ ಶ್ರೇಣಿ, ಶೇ.೧೦೦ ಸಾಧಕ ಮಕ್ಕಳಿಗೂ ಉಪಯೋಗವಾಗುವಂತೆ ಸಿದ್ದಪಡಿಸಲಾಗಿದೆ ಎಂದರು.
ಕನ್ನಡ,ಆಂಗ್ಲ ಮಾಧ್ಯಮಗಳ ಜತೆಗೆ ಪ್ರಥಮ ಭಾಷೆ ಕನ್ನಡ,ಉರ್ದು,ಇಂಗ್ಲೀಷ್, ತೃತೀಯ ಭಾಷೆ ಕನ್ನಡ,ಹಿಂದಿ ಸೇರಿದಂತೆ ಎಲ್ಲಾ ಮಕ್ಕಳಿಗೂ ಅನುಕೂಲವಾಗುವಂತೆ ಪ್ರಶ್ನೋತ್ತರ ಕೋಠಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿ, ಇದನ್ನು ಶಾಲೆಗಳಲ್ಲಿ ಸದ್ಬಳಕೆ ಮಾಡುವಲ್ಲಿ ಶಿಕ್ಷಕರು ಶ್ರಮವಹಿಸಬೇಕು ಎಂದು ಸೂಚಿಸಿದರು.
ಈ ಬಾರಿಯೂ ಫೋನ್ ಇನ್ ಕಾಯಕ್ರಮ ಆರಂಭಿಸಲಾಗಿದೆ, ಈಗಾಗಲೇ ಮೊದಲ ಫೋನ್ ಇನ್ ಕಾರ್ಯಕ್ರಮಕ್ಕೆ ಮಕ್ಕಳು,ಪೋಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮತ್ತಷ್ಟು ಬಾರಿ ಫೋನ್ ಇನ್ ಕಾರ್ಯಕ್ರಮ ನಡೆಸುವ ಇಂಗಿತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ಉರ್ದು ಇಸಿಒ ಸಿರಾಜುದ್ದೀನ್, ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.