ಜೂಜು ಅಡ್ಡೆ ಮೇಲೆ ಪೋಲಿಸ್ ದಾಳಿ29 ಜೂಜುಕೋರರ ಬಂಧನ,ಲಕ್ಷಾಂತರ ರೂ.ವಶ

ಆಲಮಟ್ಟಿ;ಜೂ.14: ಅಲ್ಲಿ ಮುಸ್ಸಂಜೆ ಹೊತ್ತು ಜೂಜಾಟದ ಗರ್ದಿ ಗಮ್ಮತ್ತು ಜೋರಾಗಿತ್ತು. ಯಾವುದೇ ಭಯ,ಆತಂಕ್ಕಿಲ್ಲದೇ ಅನೇಕರು ಜೂಜು ದಂಧೆಯಲ್ಲಿ ತೇಲಿ ತನ್ಮಯರಾಗಿದ್ದರು. ರಾಜಾರೋಷವಾಗಿ ಆ ಜೂಜು ಅಡ್ಡೆಯಲ್ಲಿ ಆಕ್ರಮ ಜೂಜಾಟದ ಸದ್ದು ಗದ್ದಲವಿಲ್ಲದೆ ಸಾಗುತ್ತಿತ್ತು.ಆದಾಗ್ಯೂ ಆ ರೋಚಕ ಜೂಜಾಟದ ಗಬ್ಬು ವಾಸನೆ ಪೋಲೀಸರ ಮೂಗಿಗೆ ಕೊನೆಗೂ ತಾಗಿತ್ತು. ವಾಸನೆ ಹಿಡಿದು ಪೋಲಿಸ್ ಪಡೆ ಅಟ್ಯಾಕ್ ಮಾಡಿದ ಪರಿಣಾಮ ಅಲ್ಲಿದ್ದ ಜೂಜು ಪ್ರಿಯ ಆಟಗಾರೆಲ್ಲ ಬಹುತೇಕ ಅಂದರ ! ಲಕ್ಷಾಂತರ ರೂ,ಖಾಕಿ ಕೈವಶ !

ಆಲಮಟ್ಟಿಗೆ ಸಮೀಪದ ಸುಕ್ಷೇತ್ರ ಯಲಗೂರ ವ್ಯಾಪ್ತಿಯಲ್ಲಿ ಇಂಥದೊಂದು ಘಟನೆ ನಡೆದಿದೆ.

ಪೋಲೀಸರು ಕ್ಷಿಪ್ರಗತಿಯಲ್ಲಿ ಕೈಗೊಂಡ ಕಾಯಾ9ಚರಣೆಗೆ ಜೂಜು ದಾಸರೆಲ್ಲ ಫೂಲ್ ಕಕ್ಕಾಬಿಕ್ಕಿಯಾಗಿದ್ದಾರೆ.ಖಾಕಿಗಳ ಈ ಭರ್ಜರಿ ಭೇಟೆಗೆ ಜೂಜಿನ ಮೊಜಿನಲ್ಲಿದ್ದವರಿಗೆ ಬಿಗ್ ಶಾಕ್ ದ ಅಘಾತ ಎರಗಿದೆ !

ಯಲಗೂರ ಕ್ರಾಸ್ ಬಳಿ ತೆಲೆ ಎತ್ತಿರುವ ಜೂಜು ಅಡ್ಡೆಯ ಮೇಲೆ ಸೋಮವಾರ ಸಂಜೆ ವಿಜಯಪುರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಹಲವರನ್ನು ಬಂಧಿಸಿ, ಲಕ್ಷಾಂತರ ರೂ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಯಲಗೂರ ಕ್ರಾಸ್ ಸಮೀಪ ಅನುಮತಿ ಪಡೆದ ಕ್ಲಬ್ ಇದಾಗಿದ್ದು, ಕ್ಲಬ್ ಸದಸ್ಯ ಅಲ್ಲದವರು ಅಕ್ರಮ ಜೂಜಾಟದಲ್ಲಿ ತೊಡಗಿದ್ದರು ಎನ್ನಲಾಗಿದೆ. ಕ್ಲಬ್ ಮುಂದೆ ನಿತ್ಯ ನೂರಾರು ವಾಹನಗಳು ನಿಲ್ಲುತ್ತಿದ್ದವು. ಹೆಚ್ಚುವರಿ ಜಿಲ್ಲಾ ಎಸ್ ಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ದಾಳಿ ನಡೆಸಿ 29 ಜನರನ್ನು ಬಂಧಿಸಿ 2,63,000 ರೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ದಾಳಿ ಬಗ್ಗೆ

ಮಾಹಿತಿ ಪಡೆಯಲು ನಿಡಗುಂದಿ ಪೊಲೀಸ್ ಠಾಣೆಗೆ ಪತ್ರಕರ್ತರು ತೆರಳಿದರೆ, ಸ್ವತಃ ನಿಡಗುಂದಿ ಸಿಪಿಐ ಅಶೋಕ ಚವ್ಹಾಣ ಯಾವುದೇ ಪತ್ರಕರ್ತರಿಗೆ ಪೊಲೀಸ್ ಠಾಣೆಯೊಳಗೆ ಬಿಡಲಿಲ್ಲ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಲು ಬಿಡಲಿಲ್ಲ.

ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್ ಪಿ ಕರುಣಾಕರಶೆಟ್ಟಿ, ರಮೇಶ ಅವಜಿ ಮತ್ತೀತರ ಪೊಲೀಸ್ ಅಧಿಕಾರಿಗಳು ದಾಳಿಯಲ್ಲಿ ಇದ್ದರು.