ಜೂಜುಕೋರರ ಮೇಲೆ ದಾಳಿ 20 ಜನರ ಬಂಧನ: 45 ಸಾವಿರ ರೂ. ವಶ

ಕಲಬುರಗಿ ಏ 4:ಇಲ್ಲಿನ ಅಮನ್ ನಗರದಲ್ಲಿ ಶನಿವಾರ ರಾತ್ರಿ ಜೂಜಾಟವಾಡುತ್ತಿದ್ದ ತಂಡವೊಂದರ ಮೇಲೆ ಹಠಾತ್ ದಾಳಿ ನಡೆಸಿದ ರೌಡಿ ನಿಗ್ರಹ ದಳದ ಪೊಲೀಸರು, 20 ಜನರನ್ನು ಬಂಧಿಸಿ, 45490 ರೂ ವಶಪಡಿಸಿಕೊಂಡಿದ್ದಾರೆ.
ಕುತ್ಬುದ್ದೀನ್ ಅಲಿಯಾಸ್ ಚೋಟು, ನಿಂಗಣ್ಣ, ಅಕುಲ್ ಶಕುರ್, ಹೈದರ್,ಅಹ್ಮದ್, ಮಹಮದ್ ಅಹ್ಮದ್, ಅಬ್ದುಲ್ ಜಾವೇದ್,ಚಾಂದಪಾಶಾ, ಮಹಮದ್ ಶಾಹೀದ್,ರಾಹುಲ್, ವೆಂಕಟೇಶ,ಖಾಜಾ ಹಸನುದ್ದೀನ್,ಮೈನೋದ್ದೀನ್ ಪಟೇಲ್,ಅಬ್ದುಲ್ ಸಲೀಂ, ಭಾಗಪ್ಪ, ಅಬ್ದುಲ್ ರಜಾಕ್,ರವಿ ಪಾಟೀಲ,ಪಾಶಾ, ವಿಷ್ಣು ಕಟ್ಟಿಮನಿ ಮತ್ತು ನಿಂಗಣ್ಣ ಎಂಬುವವರು ಬಂಧಿತ ಆರೋಪಿಗಳು.
ನಗರ ಎ ವಿಭಾಗದ ಎಸಿಪಿ ಅನ್ಶುಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ವಾಹೀದ್ ಕೋತ್ವಾಲ್,ಎಎಸ್‍ಐ ಹುಸೇನಬಾಷಾ ಮತ್ತು ಸಿಬ್ಬಂದಿಗಳಾದ ಈರಣ್ಣ,ರಾಜು,ತೌಸಿಫ್,ಶಿವಾನಂದ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು,
ಯುನಿವರ್ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ