ಜೂಜಾಟ:8 ಜನರ ಬಂಧನ

ಕಲಬುರಗಿ,ಫೆ.5-ನಗರದ ವೀರೇಂದ್ರ ಪಾಟೀಲ ಬಡಾವಣೆಯ ಈಶ್ವರ ಗುಡಿ ಹತ್ತಿರ ಜೂಜಾಡುತ್ತಿದ್ದ 8 ಜನರನ್ನು ಬಂಧಿಸಿರುವ ಎಂ.ಬಿ.ನಗರ ಪೊಲೀಸರು 28 ಸಾವಿರ ರೂ.ನಗದು, 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಎಎಸ್‍ಐ ಅಶೋಕ ಮತ್ತು ಸಿಬ್ಬಂದಿಗಳಾದ ಹಣಮಂತ ತೋಟದ, ಮಹೇಶ, ನಾಗರಾಜ ಅವರು ದಾಳಿ ಮಂಜುನಾಥ ದೊಡ್ಡಮನಿ, ನಿತಿನ ಅಗ್ಗಿ, ಮಹೇಶ ಬಿರಾದಾರ, ಕರಣ ನಾಟಿಕರ, ಮಲ್ಲಿಕಾರ್ಜುನ ಕೋರಿ, ಚೇತನ ಮರ್ತೂರಕರ್, ಖಾಜಾ ಪಾಶಾ ಮತ್ತು ಮಹಾದೇವ ಕಣ್ಣಿ ಎಂಬುವವರನ್ನು ಬಂಧಿಸಿದ್ದಾರೆ.
ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ, ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ಯಲ್ಲಪ್ಪ, ಶ್ರೀಶೈಲ, ಶಿವಕುಮಾರ, ನಾಗರಾಜ, ರವೀಂದ್ರಕುಮಾರ, ಸುನೀಲಕುಮಾರ ಅವರು ದಾಳಿ ನಡೆಸಿ ನಗರದ ದರ್ಗಾ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಛೋಟಾ ರೋಜಾ ಪಾಶಾಪುರದ ಸೈಯದ್ ಸಾಬೀರ್ ಎಂಬಾತನನ್ನು ಬಂಧಿಸಿ 5,160 ರೂ.ನಗದು ಜಪ್ತಿ ಮಾಡಿದ್ದಾರೆ. ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.