ಜೂಜಾಟ:6 ಜನರ ಬಂಧನ

ಕಲಬುರಗಿ,ಜೂ. 10: ನಗರದ ಅಳಂದ ಚೆಕ್‍ಪೋಸ್ಟ್ ಹತ್ತಿರ ಜೂಜಾಟವಾಡುತ್ತಿದ್ದ 6 ಜನರನ್ನು ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 4500 ರೂ ನಗದು ವಶಪಡಿಸಿಕೊಳ್ಳಲಾಗಿದೆ.ಚಾಂದಪಾಷಾ,ಪ್ರಭುಲಿಂಗ ಸುತಾರ,ಸಂಜು ಖೇಮಕರ್,ಶಶಿಧರ,ನರೇಶ, ಮಾಂತಪ್ಪ ಪಾಟೀಲ್ ಬಂಧಿತ ಆರೋಪಿಗಳು.ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಟಕಾ ಬರೆಯುತ್ತಿದ್ದವನ ಬಂಧನ
ಕಲಬುರಗಿ,ಜೂ 10: ತಾಲೂಕಿನ ಶ್ರೀನಿವಾಸ ಸರಡಗಿತಾಂಡಾ ಕುಂಬಾರಮಂಠದ ಹತ್ತಿರ ಮಟಕಾ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.
ಸಂತೋಷ ದಾವಜಿ ರಾಠೋಡ ಬಂಧಿತ ಆರೋಪಿ.ಬಂಧಿತನಿಂದ 2500 ರೂ ನಗದು,ಮಟಕಾ ಚೀಟಿ, 2 ಸಾವಿರ ರೂ ಮೌಲ್ಯದ ಮೊಬೈಲ್ ಜಪ್ತಿ ಮಾಡಲಾಗಿದೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.