
ಕಲಬುರಗಿ,ಆ.22-ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಇಟಗಾ (ಕೆ), ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಮೋಮಿನಪುರ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದಪುರ ಸೀಮಾಂತರದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿ 21 ಜನರನ್ನು ಬಂಧಿಸಿ 52,470 ರೂ.ನಗದು, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಇಟಕಾ (ಕೆ) ಗ್ರಾಮದ ಅಂಭಾಭವಾನಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಎಸ್‍ಐ ತಿಮ್ಮಪ್ಪ, ಸಿಬ್ಬಂದಿಗಳಾದ ರಾಜಕುಮಾರ, ಕಲ್ಯಾಣಕುಮಾರ, ಎಂ.ಆರ್.ಪಟೇಲ್, ವಿಜಯಕುಮಾರ, ರಾಜಕುಮಾರ, ಮೌನೇಶ, ಮಹಿಬೂಬ್ ಅವರು ದಾಳಿ ನಡೆಸಿ ನಯಿಮ್ ಮುಲ್ಲಾ, ಶರಣಬಸಪ್ಪ ಹೂಗಾರ, ಆನಂದ ಕೊಡಂದಾರ, ರಾಜು ನಾಟಿಕರ, ಸದ್ದಾಂ ಪೈಲ್ಹಾಣ, ವಿಜಯಕುಮಾರ ಔರಾದಕರ, ಮಹೇಶ ಚವ್ಹಾಣ್, ಬಾಬು ಶೇಖ್, ಮಲ್ಲಪ್ಪ ಕಟ್ಟಿಮನಿ, ಉಸ್ಮಾನ್ ಶೇಖ್, ಚಂದ್ರಕಾಂತ ಭಂಕೂರ ಎಂಬುವವರನ್ನು ಬಂಧಿಸಿ 18,720 ರೂ.ನಗದು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಕಲಬುರಗಿ ನಗರದ ಮೋಮಿನ್‍ಪುರ ತರಕಾರಿ ಮಾರ್ಕೆಟ್ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಪಿಎಸ್‍ಐ ಗೌಸ್ ಮೊಹಿಯೋದ್ದಿನ್, ಎಎಸ್‍ಐ ಬಾಬುರಾವ, ಸಿಬ್ಬಂದಿಗಳಾದ ಅಣ್ಣೆಪ್ಪ, ಶಿವಾನಂದ, ಸುರೇಶ, ಮೋಸಿನ್, ನಾಗೇಂದ್ರ, ಸೈಯದ್ ತೌಸಿಫ್ ಹುಸೇನ್, ಶರಣಬಸಪ್ಪ ಅವರು ದಾಳಿ ನಡೆಸಿ ರಾಮಚಂದ್ರ ಸಿಂಧೆ, ಸುರೇಶ ರಾಠೋಡ್, ನಾಮದೇವ ಗುಬ್ಬನ್, ಈರಣ್ಣ ಬೆಡ್ಡಜುರಗಿ, ಸುಭಾಷ ಪವಾರ ಎಂಬುವವರನ್ನು ಬಂಧಿಸಿ 24,480 ರೂ.ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಆಜಾದಪುರ ರಸ್ತೆಯ ಸೀಮಾಂತರದಲ್ಲಿರುವ ಲೇಔಟ್ ಹಿಂದುಗಡೆ ಇರುವ ಲಕ್ಷ್ಮೀ ಗುಡಿ ಎದರುಗಡೆಯ ಬಯಲು ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಎಎಸ್‍ಐ ಪ್ರಕಾಶ, ಸಿಬ್ಬಂದಿಗಳಾದ ಸಂಜೀವಕುಮಾರ, ಅನಿಲಕುಮಾರ, ಕಿಶೋರ, ಶಿವಶಂಕರ ಅವರು ದಾಳಿ ನಡೆಸಿ ಸಂಜಯಕುಮಾರ ಮಾನೆ, ಸತೀಶ ಜಮಾದಾರ, ವಸಂತ ಶಳಕೆ, ಪ್ರಕಾಶ ಆಕಡೆ, ದಿಲೀಪ ಪಾಟೀಲ ಎಂಬುವವರನ್ನು ಬಂಧಿಸಿ 9,270 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಫರಹತಾಬಾದ, ಚೌಕ್ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.