ಕಲಬುರಗಿ,ಮೇ 29: ನಗರದ ಎರಡು ಸ್ಥಳಗಳಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಜೂಜಾಟವಾಡುತ್ತಿದ್ದ 11 ಜನರನ್ನು ಬಂಧಿಸಿದ್ದಾರೆ.ಬಂಧಿತರಿಂದ ಒಟ್ಟು 27,320 ರೂ ನಗದು ವಶಪಡಿಸಿಕೊಳ್ಳಲಾಗಿದೆ.
ಜಿಆರ್ ನಗರ ಮೌಲಾಲಿಕಟ್ಟಿ ಗಾರ್ಡನ್ ಹತ್ತಿರ ವಿಜಯಕುಮಾರ ಖೇಡ,ಚಂದ್ರಕಾಂತ ಪಟ್ಟಣ,ಗುರುಶರಣ ಅಳಂದ,ಮಹದೇವಪ್ಪ ಧುತ್ತರಗಾಂವ,ಸಂಜೀವಕುಮಾರ ಮಾಳಿ, ಶರಣಬಸಯ್ಯ ಮಠ ಎಂಬ ಆರು ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತರಿಂದ 18,600 ರೂ ನಗದು ವಶಕ್ಕೆ ಪಡೆಯಲಾಗಿದೆ.ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಮಾಲವಾಡಿ ಹತ್ತಿರ 5 ಜನರನ್ನು ಬಂಧಿಸಿ,ಬಂಧಿತರಿಂದ 8720 ರೂ ನಗದು ವಶಪಡಿಸಿಕೊಳ್ಳಲಾಗಿದೆ.ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಸಹಾಯಕ ಆಯುಕ್ತ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ ಸಿಸಿಬಿ ಸಿಬ್ಬಂದಿಗಳು ದಾಳಿ ನಡೆಸಿ ಜೂಜಾಟದಲ್ಲಿ ನಿರತರಾಗಿದ್ದ 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.